ಸಿಂಗಾಪುರ ಬೆನ್ನಲ್ಲೇ ಹಾಂಕಾಂಗ್ ಕೂಡ ಭಾರತದ ಖ್ಯಾತ ಎಂಡಿಎಚ್ ಹಾಗೂ ಎವರೆಸ್ಟ್ ಕಂಪನಿಗಳ ಮಸಾಲಾ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ.
ಮಸಾಲಾ ಪದಾರ್ಥಗಳಲ್ಲಿ ಕಾರ್ಸಿನೋಜೆನಿಕ್ ಕೀಟನಾಶಕ ಎಥಿಲೀನ್ ಆಕ್ಸೈಡ್ ರಾಸಾಯನಿಕ ಅಂಶಗಳನ್ನು ಸೇರಿಸಲಾಗುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಹಾಂಕಾಂಗ್ ಎಡಿಎಚ್ ಕಂಪನಿಯ ಮಸಾಲಾ ಪದಾರ್ಥ ನಿಷೇಧಿಸಿದೆ. ವಾರದ ಹಿಂದೆಯಷ್ಟೇ ಸಿಂಗಾಪುರದಲ್ಲಿ ಎವರೆಸ್ಟ್ ಕಂಪನಿಯ ಮಸಾಲಾ ಪದಾರ್ಥ ರದ್ದುಗೊಳಿಸಿತ್ತು.
ಏಪ್ರಿಲ್ 5ರಂದು ಹಾಂಕಾಂಗ್ ಸರ್ಕಾರದ ಸೆಂಟರ್ ಫಾರ್ ಫುಡ್ ಸೇಫ್ಟಿ ಸಂಸ್ಥೆ ಪರಿಶೀಲನೆ ನಡೆಸಿದ್ದು, ಎಂಡಿಎಚ್ ಕಂಪನಿಯ ಮದ್ರಾಸ್ ಕರ್ರಿ ಪೌಡರ್, ಸಾಂಬರ್ ಮಸಾಲಾ ಪೌಡರ್ ಮತ್ತು ಕರ್ರಿ ಪೌಡರ್ ನಲ್ಲಿ ಅಪಾಯಕಾರಿ ಕೀಟನಾಶಕ ಅಂಶಗಳು ಪತ್ತೆಯಾಗಿದ್ದವು.