ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ. ನಮಗೆ ಬೇಕಾದಂತೆ ಸಂವಿಧಾನ ರಚನೆ ಮಾಡಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಶೋಷಣೆ, ದಬ್ಬಾಳಿಕೆ ಹಾಗೂ ಸಮಾತನೆಗಾಗಿ ಮತದಾನದ ಹಕ್ಕು ಎಲ್ಲರಿಗೂ ನೀಡಲಾಗಿದೆ ಎಂದರು.
ಭಾರತದಲ್ಲಿ416 ಜನರಿಗೆ ಮಾತ್ರ ಮತದಾನದ ಅವಕಾಶ ಇತ್ತು ದುಂಡುಮೇಜಿನ ಸಭೆಯಲ್ಲಿ ಅಂಬೇಡ್ಕರ್ ವಾದವನ್ನು ಬ್ರಿಟಿಷರು ಒಪ್ಪಿದರು. ಇದಕ್ಕೆ ಸಂತಸ ವ್ಯಕ್ತಪಡಿಸಿದ ಅಂಬೇಡ್ಕರ್ ರಾಜ ಅರಮನೆಯಲ್ಲಿ ಹುಟ್ಟುತ್ತಿದ್ದ. ಇನ್ನು ಮುಂದೆ ಮತಗಟ್ಟೆಯಲ್ಲಿ ಹುಟ್ಟುತ್ತಾನೆ ಎಂದು ಸಂಭ್ರಮಿಸಿದ್ದರು.
ಇದೇ ವೇಳೆ ಸಿಪಿ ಯೋಗೇಶ್ವರ್ ದೇವೇಗೌಡರು ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರಿಗೆ ಸಲಹೆ ಕೊಡಲು ನಾವು ಯಾರು? ಆರೋಗ್ಯಕರ ರಾಜಕೀಯ ಮಾಡುವುದಾದರೆ ಕೊನೆಯ ಉಸಿರು ಇರುವವರೆಗೂ ರಾಜಕೀಯ ಮಾಡಲು ಅವಕಾಶವಿದೆ ಎಂದರು.