ಬೆಂಗಳೂರಿನ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣದಲ್ಲಿ ನಾಲ್ವರು ಪೊಲೀಸರಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
ಸಿಐಡಿ ವಿಶೇಷ ನ್ಯಾಯಾಲಯವಾದ ಬೆಂಗಳೂರಿನ 51ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಶಿಕ್ಷೆ ವಿಧಿಸಿದೆ.
2019ರಲ್ಲಿ ಕಳ್ಳತನ ಪ್ರಕರಣದಲ್ಲಿ ಅನುಮಾನದ ಮೇಲೆ ಬಂಧಿಸಲಾಗಿದ್ದ ಮಹೇಂದ್ರ ರಾಥೋಡ್ ಎಂಬಾತ ವಿಚಾರಣೆ ವೇಳೆ ಪೊಲೀಸರ ಥಳಿತದಿಂದ ಲಾಕಪ್ ನಲ್ಲಿ ಮೃತಪಟ್ಟಿದ್ದ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪೇದೆಗಳಾದ ಏಜಾಜ್ ಖಾನ್, ಕೇಶವಮೂರ್ತಿ, ಮೋಹನ್ ರಾಮ್ ಮತ್ತು ಸಿದ್ದಪ್ಪ ಬೊಮ್ಮನಹಳ್ಳಿ ಅವರಿಗೆ ನ್ಯಾಯಾಲಯ 12 ವರ್ಷ ಜೈಲು ಶಿಕ್ಷೆ ಹಾಗೂ ೫೫ ಸಾವಿರ ರೂ. ದಂಡ ವಿಧಿಸಿದೆ.
ಐಪಿಸಿ ಸೆಕ್ಷನ್ 302 [2]ರ ಪ್ರಕಾರ ಆರೋಪಿಗಳಿಗೆ 7 ವರ್ಷ ಜೈಲು ಹಾಗೂ 30 ಸಾವಿರ ರೂ. ದಂಡ ಅಲ್ಲದೇ ಸೆಕ್ಷನ್ 330ರ ಪ್ರಕಾರ ೫ ವರ್ಷ ಜೈಲು ಹಾಗೂ ತಲಾ ೨೫ ಸಾವಿರ ರೂ. ದಂಡ ವಿಧಿಸಲಾಗಿದೆ. ಸರ್ಕಾರದ ಪರ ವಕೀಲೆ ಕೃಷ್ಣವೇಣಿ ವಾದ ಮಂಡಿಸಿದ್ದರು.