ಲೆಗ್ ಸ್ಪಿನ್ನರ್ ಸಿಮ್ರಾನ್ ಶೇಖ್ ಮಹಿಳಾ ಪ್ರೀಮಿಯರ್ ಲೀಗ್ 2025ನೇ ಸಾಲಿನ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಭಾನುವಾರ ನಡೆದ ಮಿನಿ ಹರಾಜಿನಲ್ಲಿ ಸಿಮ್ರಾನ್ ಶೇಖ್ ಅವರನ್ನು ಮುಂಬೈ ಇಂಡಿಯನ್ಸ್ 1.90 ಕೋಟಿ ರೂ.ಗೆ ಖರೀದಿಸಿದರು. ಈ ಮೂಲಕ ಸಿಮ್ರಾನ್ ಅತ್ಯಂತ ದುಬಾರಿ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.
ತಮಿಳುನಾಡಿನ 16 ವರ್ಷದ ವಿಕೆಟ್ ಕೀಪರ್ ಮತ್ತುತ ಎಡಗೈ ಬ್ಯಾಟ್ಸ್ ವುಮೆನ್ ಆಗಿರುವ ಜಿ. ಕಮಲಿನಿ ಅವರನ್ನು 1.60 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ತಂಡ ಖರೀದಿಸಿದೆ. ಅತ್ಯಂತ ದುಬಾರಿ ಮೊತ್ತ ಗಳಿಸಿದ ಕಿರಿಯ ಆಟಗಾರ್ತಿ ಎಂಬ ದಾಖಲೆಗೆ ಕಮಿಲಿನಿ ಪಾತ್ರರಾಗಿದ್ದಾರೆ.
ವೆಸ್ಟ್ ಇಂಡೀಸ್ ಆಲ್ ರೌಂಡರ್ ದೀನೇಂದ್ರ ಡೊಟ್ಟಿನ್ 1.60 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಪಾಲಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1.2 ಕೋಟಿ ರೂ.ಗೆ ಪ್ರೇಮಾ ರಾವತ್ ಅವರನ್ನು ಸೆಳೆದುಕೊಂಡಿತು. ಈ ಮೂಲಕ ಸಿಮ್ರಾನ್, ಕಮಿಲಿನಿ, ಡೊಟ್ಟಿನ್ ಮತ್ತು ಪ್ರೇಮಾ 1 ಕೋಟಿಗೂ. ಅಧಿಕ ಮೊತ್ತಕ್ಕೆ ತಂಡಗಳನ್ನು ಸೇರಿಕೊಂಡ ಆಟಗಾರ್ತಿಯರು ಎನಿಸಿಕೊಂಡರು.
ಭಾರತ ತಂಡದ ಸ್ಟಾರ್ ಆಟಗಾರ್ತಿಯರಾದ ಸ್ನೇಹ ರಾಣಾ ಮತ್ತು ಪೂನಮ್ ಯಾದವ್ ಅವರನ್ನು ಯಾವುದೇ ತಂಡ ಖರೀದಿಸುವ ಆಸಕ್ತಿ ತೋರದ ಕಾರಣ ಅನ್ ಸೋಲ್ಡ್ ಆಟಗಾರ್ತಿಯರು ಎನಿಸಿಕೊಂಡರು.