Thursday, December 25, 2025
Google search engine
Homeಕ್ರೀಡೆ3ನೇ ಟೆಸ್ಟ್: ಕಾಂಗರೂ ದಾಳಿಗೆ ಕಂಗಾಲಾದ ಭಾರತಕ್ಕೆ ವರುಣನ ಆಸರೆ!

3ನೇ ಟೆಸ್ಟ್: ಕಾಂಗರೂ ದಾಳಿಗೆ ಕಂಗಾಲಾದ ಭಾರತಕ್ಕೆ ವರುಣನ ಆಸರೆ!

ಆಸ್ಟ್ರೇಲಿಯಾದ ಮಧ್ಯಮ ವೇಗಿಗಳ ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೆ ಒಳಗಾದ ಭಾರತ ತಂಡ ಕಳಪೆ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ.

ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಸೋಮವಾರ ಆಸ್ಟ್ರೇಲಿಯಾ ತಂಡವನ್ನು 445 ರನ್ ಗೆ ಆಲೌಟ್ ಮಾಡಿದ ಭಾರತ ತಂಡ ಮಳೆಯಿಂದ ದಿನದಾಟ ರದ್ದುಗೊಂಡಾಗ ಮೊದಲ ಇನಿಂಗ್ಸ್ ನಲ್ಲಿ 51 ರನ್ ಗೆ 4 ವಿಕೆಟ್ ಕಳೆದುಕೊಂಡಿತು.

ಆರಂಭಿಕ ಆಟಗಾರನಾಗಿ ಭರವಸೆ ಮೂಡಿಸಿರುವ ಕೆಎಲ್ ರಾಹುಲ್ 64 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 33 ರನ್ ಬಾರಿಸಿ ಔಟಾಗದೇ ಉಳಿದಿದ್ದರೆ, ನಾಯಕ ರೋಹಿತ್ ಶರ್ಮ (0) ಖಾತೆ ತೆರೆಯದೇ ವಿಕೆಟ್ ಉಳಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಮಧ್ಯಮ ವೇಗಿಗಳ ದಾಳಿಗೆ ತತ್ತರಿಸಿದ ಯಶಸ್ವಿ ಜೈಸ್ವಾಲ್ (4), ಶುಭಮನ್ ಗಿಲ್ (1), ವಿರಾಟ್ ಕೊಹ್ಲಿ (3) ಮತ್ತು ರಿಷಭ್ ಪಂತ್ (9) ಎರಡಂಕಿಯ ಮೊತ್ತವನ್ನೂ ದಾಟದೇ ಪೆವಿಲಿಯನ್ ಸೇರಿದರು.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3, ಜೋಸ್ ಹಾಜ್ಲೆವುಡ್ ಮತ್ತು ಪ್ಯಾಟ್ ಕಮಿನ್ಸ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ 7 ವಿಕೆಟ್ ಗೆ 405 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ತಂಡ ಮಿಚೆಲ್ ಸ್ಟಾರ್ಕ್ (18)  ಹೋರಾಟದಿಂದ 450ರ ಗಡಿ ಸಮೀಪ ತಲುಪಿತು. ಭಾರತದ ಪರ ಜಸ್ ಪ್ರೀತ್ ಬುಮ್ರಾ 6 ವಿಕೆಟ್ ಕಬಳಿಸಿದರೆ, ಮೊಹಮದ್ ಸಿರಾಜ್ 2, ಆಕ್ಷ್ ದೀಪ್ ಮತ್ತು ನಿತಿನ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments