ಪರ್ವತಗಳ ನಡುವಿನ ರೆಸಾರ್ಟ್ ನಲ್ಲಿ ತಂಗಿದ್ದ 12 ಭಾರತೀಯರ ಪೈಕಿ 11 ಮಂದಿ ವಿಷಾನಿಲ ಸೇವನೆಯಿದ ಮೃತಪಟ್ಟ ಆಘಾತಕಾರಿ ಘಟನೆ ಜಾರ್ಜಿಯಾದಲ್ಲಿ ನಡೆದಿದೆ.
ಮಾಜಿ ಸೋವಿಯತ್ ಒಕ್ಕೂಟ ದೇಶವಾಗಿರುವ ಜಾರ್ಜಿಯಾದ ಗುದೌರಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾರತೀಯರ ಸಾವಿಗೆ ಕಾರ್ಬನ್ ಮೊನೊಕ್ಸೈಡ್ ವಿಷಾನಿಲ ಕಾರಣ ಎನ್ನಲಾಗಿದೆ.
ಜಾರ್ಜಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಘಟನೆಯ ಮಾಹಿತಿ ತರಿಸಿಕೊಂಡು ಪರಿಶೀಲನೆ ನಡೆಸುತ್ತಿದೆ. ಅಲ್ಲದೇ ಮೃತರ ಕುಟುಂಬಗಳನ್ನು ಸಂಪರ್ಕಿಸಿ ಮಾಹಿತಿ ನೀಡುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.
ಡಿಸೆಂಬರ್ 14ರಂದು ಘಟನೆ ನಡೆದಿದ್ದು, ಜ್ವಾಲಾಮುಖಿ ಸ್ಫೋಟ ಸಂಭವಿಸಿಲ್ಲ. ಅಲ್ಲದೇ ಮೃತರ ಮೈಮೇಲೆ ಯಾವುದೇ ಗಾಯಗಳಾಗಿಲ್ಲ ಎಂದು ಜಾರ್ಜಿಯಾ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.
ಪರ್ವತಗಳ ನಡುವೆ ರೆಸ್ಟೋರೆಂಟ್ ನಲ್ಲಿ 12 ಭಾರತೀಯರು ಕೆಲಸ ಮಾಡುತ್ತಿದ್ದು, ಇದರಲ್ಲಿ 11 ಮಂದಿ ಅಸುನೀಗಿದ್ದು, ಸಾವಿಗೆ ಕಾರ್ಬನ್ ಡೈಯಾಕ್ಸೈಡ್ ಕಾರಣ ಎಂಬುದು ತಿಳಿದು ಬಂದಿದೆ. ಸ್ಥಳೀಯ ಪೊಲೀಸರು ತನಿಖೆ ನಡೆಸಲು ತೀರ್ಮಾನಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.