ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘಾವಲ್ ಮಂಡಿಸಿದ್ದಾರೆ.
ಮಂಗಳವಾರ ಸಾಂವಿಧಾನಿಕ 129ನೇ ಮಸೂದೆ 2024 ಅನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘಾವಲ್ ಮಂಡಿಸಿದರು. ಆದರೆ ಕಾಂಗ್ರೆಸ್ ಕೂಡಲೇ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿತು.
ಮೇಘಾವಲ್ ನಾಳೆ ಮಸೂದೆಯನ್ನು ಲೋಸಕಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಮುಂದೆ ಮಂಡಿಸಲಿದ್ದು, ಜಂಟಿ ಸದನ ಸಮಿತಿಗೆ ಶಿಫಾರಸು ಮಾಡುವಂತೆ ಮನವಿ ಮಾಡಿದದರು.
ವಿರೋಧ ಪಕ್ಷದ ವಿರೋಧದ ನಡುವೆಯೂ ಮೇಘಾವಲ್ ಮಸೂದೆಯನ್ನು ಮಂಡಿಸಿದ್ದು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹದ ವೇಳೆ 21,000 ಸಲಹೆಗಳು ಬಂದಿವೆ. ಶೇ.81ರಷ್ಟು ಜನರು ಈ ಮಸೂದೆ ಪರವಾಗಿದ್ದಾರೆ ಎಂದು ಹೇಳಿದರು.
ಜಂಟಿ ಸದನ ಸಮಿತಿಗೆ ಬಿಜೆಪಿ ಸದಸ್ಯರು ಮುಖ್ಯಸ್ಥರಾಗಿದ್ದು, ಹಲವು ಪ್ರತಿಪಕ್ಷಗಳ ನಾಯಕರು ಕೂಡ ಇದ್ದಾರೆ. ಸಮಿತಿಯು ಎರಡು ತಿಂಗಳ ಒಳಗಾಗಿ ಅಂಕಿ-ಅಂಶಗಳ ಸಮೇತ ವರದಿ ನೀಡುವಂತೆ ಸೂಚಿಸಲಾಗುವುದು.
ಏಕಾಏಕಿ ಮಸೂದೆ ಮಂಡಿಸಿದ್ದಕ್ಕೆ ಪ್ರತಿಪಕ್ಷಗಳಾದ ಸಮಾಜವಾದಿ, ಕಾಂಗ್ರೆಸ್, ತೃಣಮೂಲಕ ಕಾಂಗ್ರೆಸ್ ಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ನಿಮ್ಮ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ. ಕೂಡಲೇ ಮಸೂದೆ ಮಂಡನೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.