ವೃತ್ತಿಯಲ್ಲಿ ವಕೀಲೆ ಆಗಿರುವ ಅರ್ಜೆಂಟೀನಾದ 60 ವರ್ಷದ ಮಹಿಳೆ ಅಲೆಜೆಂಡ್ರಾ ಮಾರಿಸಾ ರೋಡ್ರಿಗಜ್ ಬ್ಯೂನಸ್ ಐರಿಸ್ ನಲ್ಲಿ ನಡೆದ ಮಿಸ್ ಯೂನಿವರ್ಸ್ ಕಿರೀಟ ಧರಿಸುವ ಮೂಲಕ ಇತಿಹಾಸ ಬರೆದಿದ್ದಾರೆ.
60ನೇ ವಯಸ್ಸಿನಲ್ಲಿ ಮಿಸ್ ಯೂನಿವರ್ಸ್ ಪ್ರಶಸ್ತಿ ಗೆದ್ದ ಮೊದಲ ಮಹಿಳೆ ಎಂಬ ಗೌರವಕ್ಕೆ ಅಲೆಜೆಂಡ್ರಾ ಮಾರಿಸಾ ಪಾತ್ರರಾಗಿದ್ದಾರೆ. ಅಂತಿಮ ಸುತ್ತಿನಲ್ಲಿ 34 ಸ್ಪರ್ಧಿಗಳು ಕಣದಲ್ಲಿದ್ದರು. ಇದರಲ್ಲಿ 13 ವರ್ಷದಿಂದ 73 ವಯಸ್ಸಿನವರು ಸ್ಪರ್ಧೆಯಲ್ಲಿದ್ದರು.
ಅಲೆಜೆಂಡ್ರಾ ಯಾರಿಕೆ?
ಅಜೆಲೆಂಡ್ರಾ ಮಾರಿಸಾ ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್ ನಿವಾಸಿ ಆಗಿದ್ದು, ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಪತ್ರಕರ್ತೆ ವೃತ್ರಿ ಆರಂಭಿಸಿ ನಂತರ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಮಿಸ್ ಯೂನಿವರ್ಸ್ ನಲ್ಲಿ ಪಾಲ್ಗೊಳ್ಳುವ ಆಸೆ ಹೊಂದಿದ್ದ ಅಜೆಲೆಂಡ್ರಾ ಬಹುದಿನಗಳ ಆಸೆಯಾಗಿತ್ತು. ಇತ್ತೀಚೆಗೆ ನಿಯಮ ಬದಲಿಸಿ ಎಲ್ಲಾ ವಯೋಮಾನದವರಿಗೂ ಅವಕಾಶ ನೀಡಿದ್ದರಿಂದ ಪಾಲ್ಗೊಂಡಿದ್ದರು. ಅಲ್ಲದೇ ಮೊದಲ ಪ್ರಯತ್ನದಲ್ಲೇ ಕಿರೀಟ ಧರಿಸಿ ಇತಿಹಾಸ ಬರೆದರು.