ಮುಸ್ಲಿಮನಾಗಿ ದಂಗಾಲ್ ಚಿತ್ರದ ಚಿತ್ರೀಕರಣದ ವೇಳೆ ಪಂಜಾಬ್ ನಲ್ಲಿ ನಮಸ್ತೆ ಮಹತ್ವ ಅರಿವಾಯಿತು ಎಂದು ಬಾಲಿವುಡ್ ನಟ ಅಮಿರ್ ಖಾನ್ ಹೇಳಿದ್ದಾರೆ.
ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮ ಶೋನಲ್ಲಿ ಆತಿಥಿಯಾಗಿ ಕಾಣಿಸಿಕೊಂಡಿದ್ದ ಅಮಿರ್ ಖಾನ್ ಈ ವಿಷಯವನ್ನು ಹೇಳಿಕೊಂಡಿದ್ದಾರೆ. 2016ರಲ್ಲಿ ಪಂಜಾಬ್ ನ ಸಣ್ಣ ಹಳ್ಳಿಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ `ನಮಸ್ತೆ’ ಎಷ್ಟು ಮಹತ್ವದ್ದು ಎಂದು ಒಬ್ಬ ಮುಸ್ಲಿಮನಾಗಿ ತಿಳಿದುಕೊಂಡೆ ಎಂದಿದ್ದಾರೆ.
ದಂಗಾಲ್ ಚಿತ್ರದ ವೇಳೆ ಹಳ್ಳಿಯಲ್ಲಿ ಸುಮಾರು ಎರಡೂವರೆ ತಿಂಗಳು ಕಳೆದಿದ್ದೆ. ಈ ವೇಳೆ ನನಗೆ ನಮಸ್ತೆ ಎಷ್ಟು ಮಹತ್ವದ್ದು ಎಂದು ತಿಳಿಯಿತು. ಇದಕ್ಕೂ ಮುನ್ನ ರಂಗ್ ದೇ ಬಸಂತಿ ಚಿತ್ರದ ಚಿತ್ರೀಕರಣ ಪಂಜಾಬ್ ನಲ್ಲಿ ನಡೆದಿತ್ತು. ಪಂಜಾಬ್ ನ ಸಂಸ್ಕೃತಿ ಪರಿಚಯವಾಯಿತು ಎಂದು ಅವರು ಹೇಳಿದರು.