Home ತಾಜಾ ಸುದ್ದಿ ಡಿಎಂಕೆ ಸಂಸದ ಕತಿರ್ ಆನಂದ್ ದಾಳಿ: ತಮಿಳುನಾಡಿನಲ್ಲಿ ಇಡಿ ಸರಣಿ ದಾಳಿ!

ಡಿಎಂಕೆ ಸಂಸದ ಕತಿರ್ ಆನಂದ್ ದಾಳಿ: ತಮಿಳುನಾಡಿನಲ್ಲಿ ಇಡಿ ಸರಣಿ ದಾಳಿ!

ಪ್ರತಿಪಕ್ಷ ಡಿಎಂಕೆ ಮೈತ್ರಿಕೂಟದ ಆಡಳಿತವಿರುವ ತಮಿಳುನಾಡಿನಲ್ಲಿ ಜಾರಿ ನಿರ್ದೇಶನಾಲಯ ಸರಣಿ ದಾಳಿ ಮುಂದುವರಿದಿದೆ.

by Editor
0 comments
dmk mp katir

ಪ್ರತಿಪಕ್ಷ ಡಿಎಂಕೆ ಮೈತ್ರಿಕೂಟದ ಆಡಳಿತವಿರುವ ತಮಿಳುನಾಡಿನಲ್ಲಿ ಜಾರಿ ನಿರ್ದೇಶನಾಲಯ ಸರಣಿ ದಾಳಿ ಮುಂದುವರಿದಿದೆ.

ಸಚಿವ ದುರೈಮುರುನ್ ಅವರ ನಿವಾಸ, ಕಚೇರಿಗಳ ಮೇಲೆ ದಾಳಿಯ ನಂತರ ಇಡಿಯ ಕಣ್ಣು ಡಿಎಂಕೆ ಸಂಸದ ಕತಿರ್ ಆನಂದ್ ಮೇಲೆ ಬಿದ್ದಿದೆ.

ಆನಂದ್ ಅವರ ಇಂಜಿನಿಯರಿಂಗ್ ಕಾಲೇಜ್ ಸೇರಿದಂತೆ ಅವರಿಗೆ ಸಂಬಂಧಿಸಿದ ಇತರೆ ಸ್ಥಳಗಳಲ್ಲಿ ಶನಿವಾರವೂ ಇಡಿ ಅಧಿಕಾರಿಗಳ ದಾಳಿ ಮುಂದುವರೆದಿದೆ.

ಶುಕ್ರವಾರ ಆರಂಭವಾದ ಇಡಿ ದಾಳಿ ಶನಿವಾರ ಕೂಡ ಮುಂದುವರೆದಿದ್ದು, ಕಟಪಾಡಿಯ ಕ್ರಿಶ್ಚಿಯನ್ ಪೇಟೆಯಲ್ಲಿರುವ ಕಿಂಗ್ಸ್‌ಟನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಡಿ ಪರಿಶೀಲನೆಯಲ್ಲಿ ೧೮ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ.

banner

ಕತೀರ್ ಆನಂದ್ ಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವ ನಾಯಕ ದುರೈಮುರುಗನ್ ಅವರ ಪುತ್ರನಾಗಿದ್ದು, ವೆಲ್ಲೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಶುಕ್ರವಾರ ಕಾಲೇಜಿನಲ್ಲಿ ದಾಳಿ ಮತ್ತು ಕಡತಗಳ ಪರಿಶೀಲನೆ ವೇಳೆ ಲಾಕರ್ನಲ್ಲಿ ಸಿಕ್ಕಿದ್ದ ಲೆಕ್ಕವಿಲ್ಲದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾಲೇಜಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳ ಪರಿಶೀಲನೆ ಇಂದು ಕೂಡ ಮುಂದುವರೆದಿದೆ.

ಇತ್ತ ಕಟಪಾಡಿಯ ಗಾಂಧಿನಗರದಲ್ಲಿರುವ ನಿವಾಸ ಮೇಲೂ ಇಡಿ ಶೋಧ ಮುಂದುವರೆದಿದ್ದು, ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಆರಂಭವಾದ ಪರಿಶೀಲನೆ ಶನಿವಾರ ನಸಕಿನಜಾವ 1.35ರವರೆಗೆ ಸತತ 11 ಗಂಟೆಗಳ ಕಾಲ ಸಾಗಿತು.

ಈ ದಾಳಿ ವೇಳೆ ಅಧಿಕಾರಿಗಳು ಕತೀರ್ ಆನಂದ್ ತಂದೆ ಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡು ಸಚಿವ ಎಸ್. ದುರೈಮುರುಗನ್ ಅವರ ಕೋಣೆಯನ್ನು ತೆರೆಯಲು ಹರಸಾಹಸಪಟ್ಟರು. ಇದು ವೇಳೆ ನೆರೆಹೊರೆಯವರಲ್ಲಿ ಗದ್ದಲ ಉಂಟಾಯಿತು.

ಈ ದಾಳಿಯು ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳಿಗೂ ಗುರಿಯಾಗಿದೆ. ಇಡಿ ಬಳಕೆ ಮಾಡಿ ರಾಜಕೀಯ ಒತ್ತಡ ಹೇರಲಾಲಾಗುತ್ತಿದೆ ಎಂದು ಡಿಎಂಕೆ ನಾಯಕರು ಆರೋಪಿಸಿದ್ದಾರು.

ದಾಳಿಯ ಕುರಿತಾಗಿ ಇಡಿ ಇನ್ನೂ ಅಧಿಕೃತ ಹೇಳಿಕೆ ಮತ್ತು ಸಾಕ್ಷ್ಯಗಳ ವಿವರ ನೀಡಿಲ್ಲ. ಆದಾಗ್ಯೂ ದೀರ್ಘ ಕಾಲದ ಈ ಕಾರ್ಯಾಚರಣೆ ಹಾಗೂ ನಗದು ಮತ್ತು ದಾಖಲಾತಿ ವಶದ ಹಿಂದೆ ಅಕ್ರಮ ಹಣಕಾಸಿನ ಶಂಕೆ ವ್ಯಕ್ತವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ: ಹೆಚ್ಚುವರಿ 2 ಗಂಟೆ ವಿದ್ಯುತ್ ಪೂರೈಸಲಿರುವ ರಾಜ್ಯ ಸರ್ಕಾರ! ಮೈಸೂರಿನಲ್ಲಿ ರೈಲ್ವೆ ರಕ್ಷಣಾ ಪಡೆ ತರಬೇತಿ ಕೇಂದ್ರ ಸ್ಥಾಪನೆಗೆ ಕೇಂದ್ರ ಒಪ್ಪಿಗೆ ನಟಿ ಜಯಂತಿ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ: ಸಿಎಂ ಸಿದ್ದರಾಮಯ್ಯ ಘೋಷಣೆ ರೋಹಿತ್, ಕೊಹ್ಲಿಗೆ ಚಾಂಪಿಯನ್ಸ್ ಟ್ರೋಫಿ ಕೊನೆ? ಟಿಬೆಟ್-ನೇಪಾಳ ಗಡಿಯಲ್ಲಿ ಭೂಕಂಪ; 126ಕ್ಕೇರಿದ ಸಾವಿನ ಸಂಖ್ಯೆ 200 ಮಂದಿಗೆ ಗಾಯ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಡಿನ್ನರ್ ಪಾರ್ಟಿ ರದ್ದುಗೊಳಿಸಿದ ಜಿ.ಪರಮೇಶ್ವರ್ ಕಾರು ರೇಸ್ ಅಭ್ಯಾಸದ ವೇಳೆ ಅಪಘಾತ: ನಟ ಅಜಿತ್ ಕುಮಾರ್ ಪಾರು! ಮಂಗಳೂರಿನಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ! BREAKING ಶಿವಮೊಗ್ಗದಲ್ಲಿ 6 ಮಕ್ಕಳಲ್ಲಿ HMPV ಸೋಂಕು ಪತ್ತೆ! ವರ್ಷದ ಕೊನೆಯಲ್ಲಿ ಖರ್ಚು ಮಾಡುವ ಅಸಹ್ಯ ಅಭ್ಯಾಸ: ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಿಎಂ ಚಾಟಿ