ರಾಜ್ಯ ಸರ್ಕಾರ ಬಿಯರ್ ದರ ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.
ಕಳೆದ 6 ತಿಂಗಳ ಹಿಂದೆಯಷ್ಟೇ ಬಿಯರ್ ದರ ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ಬಿಯರ್ ದರ ಹೆಚ್ಚಿಸಿ ಮದ್ಯ ಪ್ರಿಯರಿಗೆ ಶಾಕ್ ನೀಡಿದೆ.
ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಬಿಯರ್ ಮೇಲಿನ ಸುಂಕದ ದರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಿಯರ್ ಬೆಲೆಯಲ್ಲಿ 10 ರಿಂದ 45 ರೂ.ವರೆಗೂ ಬೆಲೆ ಏರಿಕೆಯಾಗಲಿದೆ.
ಪರಿಷ್ಕೃತ ದರ ಇಂದಿನಿಂದಲೇ ಜಾರಿ ಆಗಲಿದ್ದು, ಯಾವ ಬ್ರ್ಯಾಂಡ್ನ ದರ ಎಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ. ಈ ಹಿಂದೆ 100 ರೂಪಾಯಿ ಇದ್ದ ಲೆಜೆಂಡ್ ಬಿಯರ್ ದರ 145 ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ 130 ರೂಪಾಯಿ ಇದ್ದ ಪವರ್ ಕೂಲ್ ಬಿಯರ್ ದರ 155 ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ 145 ರೂಪಾಯಿ ಇದ್ದ ಬ್ಲಾಕ್ ಫೋರ್ಟ್ ಬಿಯರ್ ದರ 160 ರೂಪಾಯಿಗೆ ಏರಿಕೆಯಾಗಿದೆ.