ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಭ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಘೋಷಿಸಲಾಗಿದೆ.
ಸೋಮವಾರ ರಿಷಭ್ ಪಂತ್ ಅವರ ನಾಯಕನಾಗಿರುವ ಜೆರ್ಸಿ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ನಾಯಕನಾಗಿ ಪಂತ್ ಅವರನ್ನು ಘೋಷಿಸಲಾಯಿತು.
ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತವಾದ 27 ಕೋಟಿ ರೂ.ಗೆ ಖರೀದಿಸಿದ್ದ ಪಂತ್ ಅವರನ್ನು ಎಲ್ ಎಸ್ ಜಿ ತಂಡದ ನಾಯಕನಾಗಿ 2025ನೇ ಸಾಲಿನ ಐಪಿಎಲ್ ನಲ್ಲಿ ಮುನ್ನಡೆಸಲಿದ್ದಾರೆ.
ವಿವಾದಗಳ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ತಂಡವನ್ನು ತೊರೆದ ನಂತರ ಇದೀಗ ರಿಷಭ್ ಪಂತ್ ನಾಯಕ ಸ್ಥಾನ ಭರ್ತಿ ಮಾಡಲಿದ್ದಾರೆ. ಪಂತ್ ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದು, ತಂಡ ಉಳಿಸಿಕೊಳ್ಳದ ಕಾರಣ ಹಾರಾಜಿಗೆ ಬಂದಿದ್ದರು.