ಮಧ್ಯಮ ವೇಗಿ ವಾಸುಕಿ ಕೌಶಿಕ್ ನೇತೃತ್ವದಲ್ಲಿ ಕರ್ನಾಟಕದ ಬೌಲರ್ ಗಳು ನಡೆಸಿದ ಮಾರಕ ದಾಳಿಗೆ ತತ್ತರಿಸಿದ ಪಂಜಾಬ್ ತಂಡ ರಣಜಿ ಟ್ರೋಫಿ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 55 ರನ್ ಗೆ ಆಲೌಟ್ ಆಗಿದೆ.
ಬೆಂಗಳೂರಿನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡ 29 ಓವರ್ ಗಳಲ್ಲಿ ಮೊದಲ ಇನಿಂಗ್ಸ್ ನಲ್ಲಿ 55 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟ್ ಆಗಿದೆ.
ಕರ್ನಾಟಕದ ಪರ ಮಾರಕ ದಾಳಿ ಸಂಘಟಿಸಿದ ವಾಸುಕಿ ಕೌಶಿಕ್ 16 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಅಭಿಲಾಷ್ ಶೆಟ್ಟಿ 3, ಪ್ರಸಿದ್ಧ ಕೃಷ್ಣ 2 ಮತ್ತು ಯಶೋವರ್ಧನ್ ಪ್ರತಾಪ್ 1 ವಿಕೆಟ್ ಪಡೆದು ಪಂಜಾಬ್ ಗೆ ಭರ್ಜರಿ ಪಂಚ್ ನೀಡಿದರು.
ಪಂಜಾಬ್ ಪರ ರಮಣದೀಪ್ ಸಿಂಗ್ 16, ಮಯಾಂಕ್ ಮರ್ಕಂಡೆ 12 ರನ್ ಬಾರಿಸಿ ಎರಡಂಕಿಯ ಮೊತ್ತ ದಾಟಿಸಿದರೆ ಉಳಿದ ಬ್ಯಾಟ್ಸ್ ಮನ್ ಗಳ ಒಂದಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು.