ಚಿತ್ರೀಕರಣದ ವೇಳೆ ಸಂಭವಿಸಿದ ಅಪಘಾತದಲ್ಲಿ ಅಸ್ವಸ್ಥಗೊಂಡಿದ್ದ ತಮಿಳು ಖ್ಯಾತ ನಟ ವಿಶಾಲ್ ಗೆ ತುಳು ದೈವ ಅಭಯ ನೀಡಿದೆ.
ಮಂಗಳೂರಿನ ಮೂಲ್ಕಿ ಬಳಿಯ ಹರಿಪಾದೆಯ ಜಾರಂದಾಯ ದೈವ ನೇಮೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ವಿಶಾಲ್ ದೈವದ ಮೊರೆ ಹೋಗಿದ್ದರು.
ದೈವದ ಬಳಿ ತನ್ನ ಆರೋಗ್ಯದ ಬಗ್ಗೆ ಪ್ರಶ್ನೆ ಹಾಕಿದಾಗ ಉತ್ತರಿಸಿದ ಚಾರಂದಾಯ ದೈವ, ಕಣ್ಣೀರು ಹಾಕಬೇಡ, ನಾನಿದ್ದೇನೆ. ಆರೋಗ್ಯ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ ಎಂದು ಅಭಯ ನೀಡಿತು.
ವಿಶಾಲ್ ಸಮಾರಂಭವೊಂದರಲ್ಲಿ ಮಾತನಾಡಲು ತಡವರಿಸಿದ್ದು, ಮೈಕ್ ಹಿಡಿದಿದ್ದಾಗ ಕೈ ನಡುಗುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ಇದೀಗ ಸಾಕಷ್ಟು ಚೇತರಿಕೆ ಕಂಡಿರುವ ವಿಶಾಲ್ ಆರೋಗ್ಯದ ಕುರಿತು ತುಳುನಾಡಿದ ದೈವದ ಮೊರೆ ಹೋಗಿದ್ದರು.


