Thursday, December 25, 2025
Google search engine
Homeದೇಶಮಾಧ್ಯಮಗಳಲ್ಲಿ ಅಸಭ್ಯ ಹಾಸ್ಯ: ಕೇಂದ್ರ ಕಟ್ಟೆಚ್ಚರ!

ಮಾಧ್ಯಮಗಳಲ್ಲಿ ಅಸಭ್ಯ ಹಾಸ್ಯ: ಕೇಂದ್ರ ಕಟ್ಟೆಚ್ಚರ!

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ಹಾಸ್ಯಗಳ ಪ್ರಸರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಕಾನೂನಿನಡಿ ನಿಷೇಧಿತ ಕಂಟೆಂಟ್ ಪ್ರಸಾರ ಮಾಡುವುದರ ವಿರುದ್ಧ ಒಟಿಟಿಗ ಳಿಗೆ ಎಚ್ಚರಿಕೆ ನೀಡಿದೆ.

ಯಾವುದೇ ಕಂಟೆಂಟ್ ಅನ್ನು ಪ್ರಸಾರ ಮಾಡುವಾಗ ವಯಸ್ಸಿನ ಆಧಾರದ ಮೇಲೆ ವರ್ಗೀಕರಣ ಸೇರಿದಂತೆ ಐಟಿ ನಿಯಮಗಳು ೨೦೨೧ರ ಅಡಿಯಲ್ಲಿ ಸೂಚಿಸಲಾದ ನೀತಿ ಸಂಹಿತೆಗೆ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಒಟಿಟಿ ಮತ್ತು ಸ್ವಯಂ ನಿಯಂತ್ರಕ ಸಂಸ್ಥೆಗಳಿಗೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಆನ್ಲೈನ್ ಕ್ಯುರೇಟೆಡ್ ಕಂಟೆಂಟ್ (ಒಟಿಟಿ ಫ್ಲಾಟ್ ಫಾರ್ಮ್ ಗಳು) ಮತ್ತು ಸಾಮಾಜಿಕ ಮಾಧ್ಯಮದ ಕೆಲವರು ಪ್ರಕಟಿಸಿದ ಅಶ್ಲೀಲ ಮತ್ತು ಅಸಹ್ಯಕರ ಕಂಟೆಂಟ್ಗಳ ಹರಡುವಿಕೆಗೆ ಸಂಬಂಧಿಸಿದಂತೆ ಸಂಸತ್ತಿನ ಸದಸ್ಯರು, ಶಾಸನಬದ್ಧ ಸಂಸ್ಥೆಗಳು ಮತ್ತು ಸಾರ್ವಜನಿಕ ಕುಂದುಕೊರತೆ ವಿಭಾಗಗಳಿಂದ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

`ಮೇಲೆ ತಿಳಿಸಿದಂತೆ ಒಟಿಟಿ ಪ್ಲಾಟ್ ಫಾರ್ಮ್ ಗಳು ತಮಗೆ ಅನ್ವಯವಾಗುವ ಕಾನೂನುಗಳ ವಿವಿಧ ನಿಬಂಧನೆಗಳು ಮತ್ತು ಐಟಿ ನಿಯಮಗಳು 2021ರ ಅಡಿಯಲ್ಲಿ ಸೂಚಿಸಲಾದ ನೀತಿ ಸಂಹಿತೆಗಳನ್ನು ಅನುಸರಿಸಬೇಕು.

ಅದರಲ್ಲೂ ನೀತಿ ಸಂಹಿತೆಯ ಅಡಿಯಲ್ಲಿ ಸೂಚಿಸಲಾದ ವಯಸ್ಸಿನ ಆಧಾರಿತ ವರ್ಗೀಕರಣವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಕಾನೂನಿನಡಿ ನಿಷೇಧಿಸಲಾದ ಯಾವುದೇ ಕಂಟೆಂಟ್ ಅನ್ನು ಪ್ರಕಟಿಸಬಾರದು. ನಿಯಮಗಳ ಪಟ್ಟಿಯಲ್ಲಿ ಇರುವ ಸಾಮಾನ್ಯ ಮಾರ್ಗಸೂಚಿಗಳ ಆಧಾರದ ಮೇಲೆ ವಯಸ್ಸಿನ-ಆಧಾರಿತ ವರ್ಗೀಕರಣವನ್ನು ಕೈಗೊಳ್ಳಬೇಕು. ಚಿಕ್ಕಮಕ್ಕಳು ಅಂತಹ ಕಂಟೆಂಟ್‌ಗಳನ್ನು ನೋಡದಂತೆ ನಿರ್ಬಂಧಿಸಲು ‘ಎ’ ಸರ್ಟಿಫಿಕೇಟ್ ಕಾರ್ಯವಿಧಾನವನ್ನು ಅಳವಡಿಸಬೇಕು ಎಂದು ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments