ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಶಶಿಕಾಂತ ದಾಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಿನ್ಸಪಾಲ್ ಸೆಕ್ರೆಟರಿ ಆಗಿ ನೇಮಕಗೊಂಡಿದ್ದಾರೆ.
ಇದೇ ವೇಳೆ ನೀತಿ ಆಯೋಗದ ಸಿಇಒ ಸುಬ್ರಹ್ಮಣ್ಯಂ ಅವರ ಅಧಿಕಾರಾವಧಿಯನ್ನು ಒಂದು ವರ್ಷದ ಮಟ್ಟಿಗೆ ವಿಸ್ತರಿಸಲಾಗಿದೆ.
1987ರ ಐಎಎಸ್ ಬ್ಯಾಚ್ ನ ಸುಬ್ರಹ್ಮಣ್ಯಂ ಐಎಎಸ್ ಅಧಿಕಾರಿಯಾಗಿ ನಿವೃತ್ತಿಗೊಂಡ ನಂತರ ಕೇಂದ್ರ ನೀತಿ ಆಯೋಗದ ಸಿಇಒ ಆಗಿ 2013ರಲ್ಲಿ ಎರಡು ವರ್ಷದ ಅವಧಿಗೆ ನೇಮಕಗೊಂಡಿದ್ದರು.
ಶಶಿಕಾಂತ್ ದಾಸ್ 2018ರಲ್ಲಿ ಆರ್ ಬಿಐ ಗವರ್ನರ್ ಆಗಿ ನೇಮಕಗೊಂಡಿದ್ದು, ೬ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಲವಾರು ದಶಕಗಳ ಕಾಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿರುವ ಶಶಿಕಾಂತ್ ವಿಶೇಷವಾಗಿ ಆರ್ಥಿಕ, ಹಣಕಾಸು, ತೆರಿಗೆ ಕ್ಷೇತ್ರಗಳಲ್ಲಿ ಹೆಚ್ಚು ಸೇವೆ ಸಲ್ಲಿಸಿದ್ದಾರೆ.


