Thursday, December 25, 2025
Google search engine
Homeದೇಶ100 ಕೋಟಿ ರೂ. ವೆಚ್ಚದಲ್ಲಿ ಪಾಕಿಸ್ತಾನದಲ್ಲಿ ಹಿಂದೂ ದೇಗುಲಗಳ ನವೀಕರಣ

100 ಕೋಟಿ ರೂ. ವೆಚ್ಚದಲ್ಲಿ ಪಾಕಿಸ್ತಾನದಲ್ಲಿ ಹಿಂದೂ ದೇಗುಲಗಳ ನವೀಕರಣ

ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರವು 1 ಶತಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ದೇವಾಲಯಗಳು ಮತ್ತು ಗುರುದ್ವಾರಗಳ ನವೀಕರಣ ಮತ್ತು ಸೌಂದರ್ಯೀಕರಣಕ್ಕಾಗಿ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಇವಾಕ್ಯುಯಿ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಮುಖ್ಯಸ್ಥ ಸೈಯದ್ ಅತ್ತಾವುರ್ ರೆಹಮಾನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

“ಮಾಸ್ಟರ್ ಪ್ಲಾನ್ ಅಡಿಯಲ್ಲಿ, ದೇವಾಲಯಗಳು ಮತ್ತು ಗುರುದ್ವಾರಗಳನ್ನು ಅಲಂಕರಿಸಲಾಗುವುದು ಮತ್ತು ೧ ಬಿಲಿಯನ್ ಪಾಕ್ ರೂ.ಗಳ ಬಜೆಟ್‌ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು” ಎಂದು ರೆಹಮಾನ್ ಹೇಳಿದರು.

“ಅಲ್ಪಸಂಖ್ಯಾತ ಪೂಜಾ ಸ್ಥಳಗಳಿಗೆ ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡಲಾಗುತ್ತಿದೆ” ಎಂದು ಅವರು ಹೇಳಿದರು. ಈ ವರ್ಷ ಇಟಿಪಿಬಿ ೧ ಬಿಲಿಯನ್ ರೂ.ಗಿಂತ ಹೆಚ್ಚಿನ ಅನುದಾನವನ್ನು ಪಡೆದಿದೆ ಎಂದು ರೆಹಮಾನ್ ಹೇಳಿದರು.

ಸಭೆಯಲ್ಲಿ ದೇಶಾದ್ಯಂತದ ಹಿಂದೂ ಮತ್ತು ಸಿಖ್ ಸಮುದಾಯಗಳ ಸದಸ್ಯರು ಮತ್ತು ಸರ್ಕಾರಿ ಹಾಗೂ ಸರ್ಕಾರೇತರ ಸದಸ್ಯರು ಭಾಗವಹಿಸಿದ್ದರು.

ಪರಿಷ್ಕರಿಸಬೇಕಾದ ಇಟಿಪಿಬಿ ಅಭಿವೃದ್ಧಿ ಯೋಜನೆಯ ಬಗ್ಗೆ ಮಾತನಾಡಿದ ಮಂಡಳಿಯ ಕಾರ್ಯದರ್ಶಿ ಫರೀದ್ ಇಕ್ಬಾಲ್, ಇಲಾಖೆಯ ಆದಾಯವನ್ನು ಹೆಚ್ಚಿಸಲು ಯೋಜನೆಯನ್ನು ಬದಲಾಯಿಸಿದ ನಂತರ, ಟ್ರಸ್ಟ್ ಆಸ್ತಿಗಳನ್ನು ಅಭಿವೃದ್ಧಿಗಾಗಿ ಪ್ರಸ್ತುತಪಡಿಸಲಾಗುತ್ತಿದೆ ಎಂದು ಸದಸ್ಯರಿಗೆ ತಿಳಿಸಿದರು.

“ದೀರ್ಘಕಾಲದವರೆಗೆ ಬಳಸದ ಅಂತಹ ಭೂಮಿಯನ್ನು ಅಭಿವೃದ್ಧಿ ಕಾಯಗಳಿಗೆ ನೀಡುವ ಮೂಲಕ ಇಲಾಖೆಯ ಆದಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ” ಎಂದು ಅವರು ಹೇಳಿದರು.

ವಿವಿಧ ದೇವಾಲಯಗಳು ಮತ್ತು ಗುರುದ್ವಾರಗಳಲ್ಲಿ ಅಭಿವೃದ್ಧಿ ಮತ್ತು ನವೀಕರಣ ಕಾರ್ಯಗಳು ಮತ್ತು ಕರ್ತಾರ್ಪುರ ಕಾರಿಡಾರಿನ ಕಾಮಗಾರಿಗಳಿಗಾಗಿ ಯೋಜನಾ ನಿರ್ದೇಶಕರನ್ನು ನೇಮಿಸಲು ಸಹ ಸಭೆ ನಿರ್ಧರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments