ದಕ್ಷಿಣ ಆಫ್ರಿಕಾ ಸಂಘಟಿತ ಪ್ರದರ್ಶನಕ್ಕೆ ತತ್ತರಿಸಿದ ಇಂಗ್ಲೆಂಡ್ ಹೀನಾಯ 7 ವಿಕೆಟ್ ಗಳಿಂದ ಹೀನಾಯ ಸೋಲುಂಡಿದರೆ, ಹರಿಣಗಳ ಸೋಲಿನ ನಿರೀಕ್ಷೆಯಲ್ಲಿದ್ದ ಆಫ್ಘಾನಿಸ್ತಾನ ಸೆಮಿಫೈನಲ್ ಕನಸು ಭಗ್ನಗೊಂಡಿದೆ.
ಕರಾಚಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 38.2 ಓವರ್ ಗಳಲ್ಲಿ 179 ರನ್ ಗೆ ಪತನಗೊಂಡಿತು. ಆಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಆಸೆ ಜೀವಂತವಾಗಿ ಉಳಿಸಿಕೊಳ್ಳಬೇಕಿದ್ದರೆ ಇಂಗ್ಲೆಂಡ್ 200 ರನ್ ಗಿಂತ ಹೆಚ್ಚು ಕಲೆ ಹಾಕಬೇಕಿತ್ತು. ಆದರೆ 179 ರನ್ ಗೆ ಆಲೌಟಾಗುವ ಮೂಲಕ ಫಲಿತಾಂಶಕ್ಕೂ ಮುನ್ನವೇ ಆಫ್ಘಾನಿಸ್ತಾನ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿತು.
ಸುಲಭ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ರಾಸ್ಸೆ ವ್ಯಾನ್ ಡರ್ ಡುಸೆನ್ (72 ರನ್, 87 ಎಸೆತ, 6 ಬೌಂಡರಿ, 3 ಸಿಕ್ಸರ್) ಮತ್ತು ಹೆನ್ರಿಕ್ ಕ್ಲಾಸೆನ್ (65 ರನ್, 56 ಎಸೆತ, 11 ಬೌಂಡರಿ) ಮೂರನೇ ವಿಕೆಟ್ ಗೆ 127 ರನ್ ಜೊತೆಯಾಟದಿಂದ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಪರ ಹೋರಾಟದ ಪ್ರದರ್ಶನ ನೀಡಲಿಲ್ಲ. ಜೋ ರೂಟ್ (37), ಬೆನ್ ಡುಕೆಟ್ (24), ನಾಯಕ ಜೋ ಬಟ್ಲರ್ (21) ಮತ್ತು ಜೋಫ್ರಾ ಆರ್ಚರ್ (25) ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು. ದ.ಆಫ್ರಿಕಾ ಪರ ಮಾರ್ಕೊ ಜಾನ್ಸನ್ ಮತ್ತು ವಿಯಾನ ಮುಲ್ಲರ್ ತಲಾ 3 ವಿಕೆಟ್ ಪಡೆದು ಮಿಂಚಿದರು.


