Thursday, December 25, 2025
Google search engine
Homeದೇಶಹಳಿ ತಪ್ಪಿದ ಬೆಂಗಳೂರು-ಕಾಮಕ್ಯ ಎಕ್ಸ್ ಪ್ರೆಸ್ 11 ಬೋಗಿ, ಒಬ್ಬ ಸಾವು

ಹಳಿ ತಪ್ಪಿದ ಬೆಂಗಳೂರು-ಕಾಮಕ್ಯ ಎಕ್ಸ್ ಪ್ರೆಸ್ 11 ಬೋಗಿ, ಒಬ್ಬ ಸಾವು

ಬೆಂಗಳೂರು-ಕಾಮಕ್ಯ ಎಕ್ಸ್ ಪ್ರೆಸ್ ರೈಲಿನ 11 ಬೋಗಿಗಳು ಹಳಿ ತಪ್ಪಿದ್ದರಿಂದ ಒಬ್ಬ ಮೃತಪಟ್ಟ ಘಟನೆ ಒಡಿಶಾದ ಕಟಕ್ ನಲ್ಲಿ ಸಂಭವಿಸಿದೆ.

ಬೆಂಗಳೂರಿನಿಂದ ಹೊರಟು ಒಡಿಶಾದ ಗುವಾಹತಿಗೆ ಪ್ರಯಾಣಿಸುತ್ತಿದ್ದ ರೈಲು ಕಟಕ್ ನ ನೆರ್ಗುಂಡಿ ರೈಲು ನಿಲ್ದಾಣದ ಸಮೀಪ ಭಾನುವಾರ ಬೆಳಿಗ್ಗೆ 11.54ಕ್ಕೆ ಹಳಿ ತಪ್ಪಿದೆ. ಇದರಿಂದ ಒಬ್ಬ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ.

ರೈಲು ಹಳಿ ತಪ್ಪಲು ಕಾರಣ ತಿಳಿದು ಬಂದಿಲ್ಲ. ತನಿಖೆಗೆ ಆದೇಶಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಹಳಿ ತಪ್ಪಿದ್ದರಿಂದ ಮೂರು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments