ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಟೈನಲ್ಲಿ ಅಂತ್ಯಗೊಳ್ಳುವ ಮೂಲಕ ಮೂರು ವರ್ಷದ ನಂತರ ಪಂದ್ಯವೊಂದು ಸೂಪರ್ ಓವರ್ ಪ್ರವೇಶಿಸಿದೆ.
ದೆಹಲಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 188 ರನ್ ಸಂಪಾದಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು.
ಮಿಚೆಲ್ ಸ್ಟಾರ್ಕ್ ಎಸೆತ ಕೊನೆಯ ಓವರ್ ನಲ್ಲಿ ರಾಜಸ್ಥಾನ್ 9 ರನ್ ಗಳಿಸಬೇಕಿತ್ತು. ಕೇವಲ 3 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದರೂ ಸ್ಫೋಟಕ ಬ್ಯಾಟ್ಸ್ ಮನ್ ಹೆಟ್ಮೇಯರ್ ಮತ್ತು ಧ್ರುವ ಜುರೆಲ್ 8 ರನ್ ಗಳಿಸಲಷ್ಟೇ ಶಕ್ತವಾದರು. ಸ್ಟಾರ್ಕ್ ಒಂದೇ ಒಂದು ಬೌಂಡರಿ ಕೊಡದೇ ಕಡಿವಾಣ ಹಾಕಿದರು.
ಇದು ಐಪಿಎಲ್ ಇತಿಹಾಸದಲ್ಲೇ 15ನೇ ಸೂಪರ್ ಓವರ್ ಪಂದ್ಯವಾಗಿದ್ದು, 3 ವರ್ಷದ ನಂತರ ಸೂಪರ್ ಓವರ್ ಪ್ರವೇಶಿಸಿದ ಮೊದಲ ಪಂದ್ಯವಾಗಿದೆ.


