ಬಹು ನಿರೀಕ್ಷಿತ ನೈಋತ್ಯ ಮುಂಗಾರು ಒಂದು ದಿನ ಮುಂಚಿತವಾಗಿ ಅಂದರೆ ಮೇ 31ರಂದು ಕೇರಳವನ್ನು ಪ್ರವೇಶಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.
ಸಾಮಾನ್ಯವಾಗಿ ಮೇ 27ರಿಂದ ಜೂನ್ 4ರೊಳಗೆ ಮುಂಗಾರು ಭಾರತದ ಗಡಿಯನ್ನು ಪ್ರವೇಶಿಸುತ್ತದೆ. ಅದರಲ್ಲೂ ಕೇರಳ ರಾಜ್ಯವನ್ನು ಜೂನ್ 1ರಂದು ಪ್ರವೇಶಿಸುತ್ತದೆ. ಆದರೆ ಈ ಬಾರಿ ಅವಧಿಗೂ ಮುನ್ನವೇ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜೂನ್ 1ರಂದು ಪ್ರವೇಶಿಸಬೇಕಿದ್ದ ಮುಂಗಾರು ಮೇ 31ರಂದು ಪ್ರವೇಶಿಸಲಿದೆ ಅಂದರೆ ಅದು ಬೇಗ ಅಲ್ಲ. ಸಾಮಾನ್ಯವಾಗಿ ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರ ಪ್ರವೇಶಿಸುತ್ತದೆ. ಆದ್ದರಿಂದ ಸಹಜ ದಿನ ಅತ್ಯಂತ ಸಮೀಪದಲ್ಲಿ ಮುಂಗಾರು ಭಾರತವನ್ನು ಪ್ರವೇಶಿಸುತ್ತಿದೆ ಎಂದು ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
ಕೇರಳವನ್ನು ಪ್ರವೇಶಿಸಿದ ಒಂದು ವಾರದ ನಂತರ ಕರ್ನಾಟಕವನ್ನು ಮುಂಗಾರು ಪ್ರವೇಶಿಸಲಿದೆ. ಈ ಬಾರಿ ಶೇ.100ರಷ್ಟು ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.