ನೆಲಮಾಳಿಗೆಯಲ್ಲಿ ಹೂತುಹಾಕಿದ್ದ ವೃದ್ಧನನ್ನು ಪೊಲೀಸರು 4 ದಿನಗಳ ನಂತರ ರಕ್ಷಿಸಿದ ಆಘಾತಕಾರಿ ಘಟನೆ ಯುರೋಪ್ ನ ಸೋವಿಯತ್ ರಿಪಬ್ಲಿಕ್ ನಲ್ಲಿ ನಡೆದಿದೆ.
74 ವರ್ಷದ ಮಹಿಳೆಯ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಸಂಬಂಧಿಕರ ಮನೆಯ ನೆಲ ಮಾಳಿಗೆಯಲ್ಲಿ ಜೀವಂತವಾಗಿ ಸಮಾಧಿ ಮಾಡಲಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದು, ಶಾಕಿಂಗ್ ವೀಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಮೇ 13ರಂದು ಈ ಘಟನೆ ನಡೆದಿದ್ದು, 62 ವರ್ಷದ ವೃದ್ಧನನ್ನು ರಕ್ಷಿಸಲಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧನ ಕುತ್ತಿಗೆ ಸುತ್ತ ಗಾಯಗಳು ಕಂಡು ಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯರೊಬ್ಬರ ಸಾವಿನ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ರಕ್ಷಣೆಗಾಗಿ ವ್ಯಕ್ತಿಯೊಬ್ಬ ಕೂಗುತ್ತಿದ್ದುದ್ದನ್ನು ಕೇಳಿ ಧ್ವನಿಯನ್ನು ಆಲಿಸಿ ಮನೆಯ ಮುಂಭಾಗದಲ್ಲಿ ಅಗೆಯಲು ಶುರು ಮಾಡಿದ್ದಾರೆ. ಅಗೆಯುತ್ತಾ ಅವರು ಮನೆಯ ಮಧ್ಯದ ನೆಲ ಮಾಳಿಗೆಯಲ್ಲಿ ಹೂತು ಹಾಕಿದ್ದ ವ್ಯಕ್ತಿಯನ್ನು ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.
ವಿಚಾರಣೆ ವೇಳೆ ವೃದ್ಧ ಒಂದೊಂದು ಬಾರಿ ಒಂದೊಂದು ಉತ್ತರ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಪೊಲೀಸರು ಅವರು ಪೂರ್ಣವಾಗಿ ಮಾನಸಿಕವಾಗಿ ಚೇತರಿಸಿಕೊಂಡ ನಂತರ ಮಾಹಿತಿ ಪಡೆಯಲು ನಿರ್ಧರಿಸಿದ್ದಾರೆ.
ಅಪ್ತಾಪ್ತನ ಜೊತೆ ಮದ್ಯ ಸೇವಿಸುತ್ತಿದ್ದಾಗ ಯಾವುದೋ ವಿಷಯಕ್ಕೆ ಪರಸ್ಪರ ಗಲಾಟೆ ಆಗಿದೆ. ಈ ವೇಳೆ ಯುವಕ ಚಾಕುವಿನಿಂದ ಇರಿದಿದ್ದು, ನಾನು ಸತ್ತಿದ್ದೇನೆಂದು ಭಾವಿಸಿ ನೆಲ ಮಾಳಿಗೆಯಲ್ಲಿ ಹಾಕಿದ್ದ ಎಂದು ವೃದ್ಧ ವಿವರಿಸಿದ್ದಾರೆ.