ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಖಾಸಗಿ ಮತ್ತು ವಾಣಿಜ್ಯ ವಾಹನಗಳು ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶ ಶುಲ್ಕ ಕಡ್ಡಾಯಗೊಳಿಸಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸೋಮವಾರದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ವಿಮಾನ ನಿಲ್ದಾಣದ ಟರ್ಮಿನಲ್-1 ಮತ್ತು ಟರ್ಮಿನಲ್-2ಗೆ ನೂತನ ವಾಹನ ಶುಲ್ಕ ಜಾರಿಗೆ ಬಂದಿದ್ದು, ಇದರಿಂದ ಖಾಸಗಿ ವಾಹನ ಪ್ರಯಾಣಿಕರಿಗೆ ದುಬಾರಿ ಆಗಲಿದೆ.
ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಹೊಸ ಶುಲ್ಕ ರಚನೆಯನ್ನು ರದ್ದುಗೊಳಿಸಿದ್ದಾರೆ, ಇದರಿಂದ ಖಾಸಗಿ ಮತ್ತು ವಾಣಿಜ್ಯ ವಾಹನಗಳು ವಿಮಾನ ನಿಲ್ದಾಣದ ಆವರಣ ಪ್ರವೇಶಿಸಬೇಕಾದರೆ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರದಿಂದ ಪ್ರಯಾಣ ದುಬಾರಿಯಾಗಲಿದೆ ಎಂದು ಸೂಚನೆ ನೀಡಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.
ಓಲಾ ಮತ್ತು ಉಬರ್ ಮುಂತಾದ ಕ್ಯಾಬ್ ಗಳು ನಿರ್ವಹಿಸುವ ವಾಣಿಜ್ಯ ವಾಹನಗಳು ಸೇರಿದಂತೆ 7 ನಿಮಿಷಗಳವರೆಗೆ 150 ರೂ. ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ. 7 ನಿಮಿಷಕ್ಕಿಂತ ಹೆಚ್ಚು ಅವಧಿ ವಾಹನ ನಿಲ್ಲಿಸಿದರೆ 300 ರೂ. ಶುಲ್ಕ ಪಾವತಿಸಬೇಕಾಗುತ್ತದೆ.