ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದರಕ್ಕಿಂತ ಪಾಪ್ ಕಾರ್ನ್ ಹಾಗೂ ಪಾನೀಯಗಳೇ ದುಬಾರಿನಾ ಎಂಬ ಚರ್ಚೆ ನಡೆದಿರುವ ಮಧ್ಯೆಯೇ ಮತ್ತೊಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಹೌದು, ಪಿವಿಆರ್ ಇನ್ ಬಾಕ್ಸ್ ಥಿಯೇಟರ್ ಮಾಲೀಕರು ಪಾಪ್ ಕಾರ್ನ್, ಪೆಪ್ಸಿ ಮುಂತಾದ ತಿಂಡಿ ಹಾಗೂ ಪಾನೀಯಗಳ ಮಾರಾಟದಿಂದಲೇ ಒಂದು ವರ್ಷದಲ್ಲಿ 1900 ಕೋಟಿ ರೂ. ಸಂಪಾದಿಸಿದೆ.
ಮನಿಕಂಟ್ರೋಲ್ ಮಲ್ಟಿಪ್ಲೆಕ್ಸ್ ವರದಿ ನೀಡಿದ್ದು, 2023-2024 ಸಾಲಿನಲ್ಲಿ ಪಿವಿಆರ್ ಇನ್ ಬಾಕ್ಸ್ ನ ಆಹಾರ ಮತ್ತು ಪಾನೀಯಗಳ ಮಾರಾಟ ಪ್ರಮಾಣ ಶೇ.21ರಷ್ಟು ಏರಿಕೆಯಾಗಿದ್ದರೆ, ಸಿನಿಮಾ ಟಿಕೆಟ್ ಗಳ ಮಾರಾಟ ಶೇ.19ರಷ್ಟು ಏರಿಕೆಯಾಗಿದೆ.
2023-24ನೇ ಸಾಲಿನಲ್ಲಿ ಪಿವಿಆರ್ ಇನ್ ಬಾಕ್ಸ್ ಥಿಯೇಟರ್ ಮಾಲೀಕರು ಆಹಾರ ಮತ್ತು ಪಾನೀಯಗಳ ಮಾರಾಟದಿಂದ 1958.4 ಕೋಟಿ ರೂ. ಸಂಪಾದಿಸಿದ್ದಾರೆ. ಹಿಂದಿನ ವರ್ಷ 1618 ಕೋಟಿ ರೂ. ಗಳಿಸಿತ್ತು.
2023-24ನೇ ಸಾಲಿನಲ್ಲಿ ಟಿಕೆಟ್ ಗಳ ಮಾರಾಟ 3299.9 ಕೋಟಿ ರೂ. ಆಗಿದ್ದರೆ, ಹಿಂದಿನ ವರ್ಷ 2751.4 ಕೋಟಿ ರೂ. ಆಗಿತ್ತು. ಇದರಿಂದ ಪಿವಿಆರ್ ಗೆ ಭೇಟಿ ನೀಡುವವರ ಸಂಖ್ಯೆಯಲ್ಲೂ ಹೆಚ್ಚಳ ಆಗಿದ್ದರೂ ಟಿಕೆಟ್ ಮಾರಾಟಕ್ಕಿಂತ ಆಹಾರ ಮತ್ತು ಪಾನೀಯಗಳ ಮಾರಾಟದಿಂದ ಹೆಚ್ಚು ಆದಾಯ ಗಳಿಸುತ್ತಿದೆ ಎಂಬುದು ಅಂಕಿ-ಅಂಶಗಳೇ ಹೇಳುತ್ತವೆ.