ಆರಂಭಿಕ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಸಿಡಿಸಿದ ಶತಕಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದ್ದು, ಕುತೂಹಲ ಘಟ್ಟ ತಲುಪಿದೆ.
ಲೀಡ್ಸ್ ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಭಾರತ ಎರಡನೇ ಇನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 298 ರನ್ ಗಳಿಸಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 6 ರನ್ ಗಳ ಅಲ್ಪ ಮುನ್ನಡೆ ಸಾಧಿಸಿತ್ತು. ಇದೀಗ ಒಟ್ಟಾರೆ 304 ರನ್ ಮುನ್ನಡೆ ಸಾಧಿಸಿದೆ.
ಕೆಎಲ್ ರಾಹುಲ್ ಗೆಚ 9ನೇ ಟೆಸ್ಟ್ ಶತಕವಾದರೆ ಪಂತ್ ಗೆ ಇದು 8ನೇ ಶತಕ ಆಗಿದೆ. ಇಂಗ್ಲೆಂಡ್ ವಿರುದ್ಧ ಒಂದೇ ಪಂದ್ಯದಲ್ಲಿ ಇಬ್ಬರು ಆರಂಭಿಕರು ಶತಕ ಸಿಡಿಸಿದ ದಾಖಲೆಗೆ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಪಾತ್ರರಾದರೆ,ಪಂತ್ 2/ಶತಕ ದಾಖಲಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆಗೆ ಪಾತ್ರರಾದರು.
ಮೊದಲ ಇನಿಂಗ್ಸ್ ನಲ್ಲಿ ಕೇವಲ 6 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಸೋಮವಾರ 3 ವಿಕೆಟ್ ಗೆ 264 ರನ್ ಗಳಿಸಿದ್ದು, ಒಟ್ಟಾರೆ 270 ರನ್ ಮುನ್ನಡೆ ಸಾಧಿಸಿದಂತಾಗಿದೆ.
ಕೆಎಲ್ ರಾಹುಲ್ 202 ಎಸೆತಗಳಲ್ಲಿ 13 ಬೌಂಡರಿಯೊಂದಿಗೆ ಶತಕ ಪೂರೈಸಿದರು. ರಾಹುಲ್ ಗೆ ಉತ್ತಮ ಬೆಂಬಲ ನೀಡಿದ ರಿಷಭ್ ಪಂತ್ 130 ಎಸೆತಗಳಲ್ಲಿ ಶತಕ ಪೂರೈಸಿದರು. ಪಂತ್ಈ 140 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 118 ರನ್ ಬಾರಿಸಿ ಔಟಾದರು. ಈ ಮೂಲಕ ಒಂದೇ ಇನಿಂಗ್ಸ್ ನಲ್ಲಿ ಎರಡು ಶತಕ ಬಾರಿಸಿದ ಗೌರವಕ್ಕೆ ಪಂತ್ ಪಾತ್ರರಾದರು. .
ಭಾರತ ತಂಡ ಒಂದು ಹಂತದಲ್ಲಿ 92 ರನ್ ಗೆ 3 ವಿಕೆಟ್ ಕಳೆದುಕೊಂಡು ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ರಾಹುಲ್ ಮತ್ತು ಪಂತ್ 196 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ರಾಹುಲ್ ಮೊದಲ ಇನಿಂಗ್ಸ್ ನಲ್ಲಿ 42 ರನ್ ಗಳಿಸಿದರೆ, ಪಂತ್ ಶತಕ ಸಿಡಿಸಿದ್ದರು.


