Thursday, December 25, 2025
Google search engine
Homeದೇಶವಾಯುಪಡೆಯ ಜಾಗ್ವರ್ ಯುದ್ಧ ವಿಮಾನ ಪತನ: ಪೈಲೆಟ್ ಸೇರಿ ಇಬ್ಬರು ಸಾವು

ವಾಯುಪಡೆಯ ಜಾಗ್ವರ್ ಯುದ್ಧ ವಿಮಾನ ಪತನ: ಪೈಲೆಟ್ ಸೇರಿ ಇಬ್ಬರು ಸಾವು

ಭಾರತೀಯ ವಾಯುಪಡೆಯ ಜಾಗ್ವರ್ ಯುದ್ಧ ವಿಮಾನ ರಾಜಸ್ಥಾನದ ಚುರು ಜಿಲ್ಲೆಯ ಭಾನುಡಾ ಗ್ರಾಮದ ಬಳಿ ಬುಧವಾರ ಪತನಗೊಂಡಿದ್ದು, ಪೈಲೆಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ವಿಮಾನದ ಅವಶೇಷಗಳಡಿಯಲ್ಲಿ ಪೈಲಟ್ ದೇಹದ ಜೊತೆಗೆ ಹೊಲದಲ್ಲಿ ಮತ್ತೊಂದು ಶವ ಪತ್ತೆಯಾಗಿವೆ.

ಮೃತದೇಹ ತೀವ್ರವಾಗಿ ಹಾನಿಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪಘಾತದಲ್ಲಿ ಮೃತಪಟ್ಟಿರುವ  ಪೈಲಟ್ ಮತ್ತು ಇನ್ನೊಬ್ಬ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕೆಲಸವನ್ನು ಸೇನೆ ಮತ್ತು ಸ್ಥಳೀಯ ಆಡಳಿತ ನಡೆಸುತ್ತಿದೆ.

ಜಾಗ್ವರ್ ವಿಮಾನವನ್ನು ತರಬೇತಿ ಅಂಗವಾಗಿ ಬಳಸಲಾಗುತ್ತಿದ್ದು, ರಾಜಸ್ಥಾನ್ ನ ಬಿಕೆನಾರ್ ಮತ್ತು ಜೋಧಪುರ್ ನಲ್ಲಿ ತರಬೇತಿ ಕೇಂದ್ರಗಳಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments