Friday, November 22, 2024
Google search engine
Homeಕ್ರೀಡೆಆರ್ ಸಿಬಿಯಿಂದ ಸಿರಾಜ್, ದಯಾಳ್ ಗೆ ಕೊಕ್: ಸುಳಿವು ನೀಡಿದ ಕೋಚ್

ಆರ್ ಸಿಬಿಯಿಂದ ಸಿರಾಜ್, ದಯಾಳ್ ಗೆ ಕೊಕ್: ಸುಳಿವು ನೀಡಿದ ಕೋಚ್

ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಲಿದ್ದು, ಮುಂದಿನ ಆವೃತ್ತಿಯಲ್ಲಿ ನಿರ್ದಿಷ್ಟ ಆಟಗಾರರನ್ನು ಆಯ್ಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪ್ಲೇಆಫ್ ಪಂದ್ಯದಲ್ಲಿ ಸೋಲುಂಡ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆಂಡಿ ಫ್ಲವರ್, ಸತತ 6 ಪಂದ್ಯಗಳನ್ನು ಗೆದ್ದು ಪ್ಲೇಆಫ್ ಗೆ ಬರುವುದು ದೊಡ್ಡ ವಿಷಯ. ಆದರೆ ತಂಡವನ್ನು ಕಾಡುತ್ತಿರುವುದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಾವು ಹೆಚ್ಚಾಗಿ ಸೋಲುತ್ತಿರುವುದು ಎಂದು ಹೇಳಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ವಿಶಿಷ್ಟ ರೀತಿಯ ಪಿಚ್ ಆಗಿದ್ದು, ಇಲ್ಲಿ ಬೌಲಿಂಗ್ ಮಾಡಬೇಕಾದರೆ ಸ್ಪಿನ್ ಅಥವಾ ವೇಗ ಮುಖ್ಯವಲ್ಲ. ಬುದ್ದಿವಂತಿಕೆಯಿಂದ ಬೌಲಿಂಗ್ ಮಾಡಬೇಕಾಗಿದೆ. ಆದರೆ ಈ ಬಾರಿ ನಮ್ಮ ಬೌಲರ್ ಗಳು ಎಡವುತ್ತಿರುವುದು ಗಮನಕ್ಕೆ ಬಂದಿದ್ದು, ಬೆಂಗಳೂರಿನ ಪಿಚ್ ಗೆ ಹೊಂದಿಕೊಳ್ಳುವ ನಿರ್ದಿಷ್ಟ ರೀತಿಯ ಬೌಲರ್ ಗಳನ್ನು ಆಯ್ಕೆ ಮಾಡಲು ಚಿಂತಿಸಿದ್ದೇವೆ ಎಂದರು.

ಮುಂದಿನ ಐಪಿಎಲ್ ಹರಾಜಿನ ಬಗ್ಗೆ ನಾವು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಸದ್ಯ ತಂಡ ಸೋಲಿನ ಆಘಾತದಿಂದ ಹೊರಗೆ ಬರಬೇಕಿದೆ. ನಂತರ ಆಟಗಾರರ ಪ್ರದರ್ಶನದ ಬಗ್ಗೆ ವಿಮರ್ಶೆ ನಡೆಯಲಿದೆ. ಆದರೆ ಸದ್ಯದ ಮಟ್ಟಿಗೆ ಬೌಲರ್ ಗಳ ಪ್ರದರ್ಶನ ನಮಗೆ ತೃಪ್ತಿ ನೀಡಿಲ್ಲ. ಅದರಲ್ಲೂ ಬೆಂಗಳೂರಿನ ಪಿಚ್ ನಲ್ಲಿ ದುಬಾರಿ ಆಗಿರುವುದು ಬೇಸರ ಮೂಡಿಸಿದೆ ಎಂದು ಫ್ಲವರ್ ತಿಳಿಸಿದ್ದಾರೆ.

ಬೆಂಗಳೂರಿನ ಪಿಚ್ ಗಳಲ್ಲಿ ಮೊಹಮದ್ ಸಿರಾಜ್ (9.18), ಲೂಕಿ ಫರ್ಗೂಸನ್ (10.62), ಯಶ್ ದಯಾಳ್ (9.14), ರೇಸಿ ಟೊಪ್ಲೆ (11.200), ಕರ್ಣ್ ಶರ್ಮ (10.58) ದುಬಾರಿಯಾಗಿದ್ದು, ಯಾರೂ ಕೂಡ ಸಮಾಧಾನಕರ ದಾಳಿ ನಡೆಸಿಲ್ಲ. ಆರ್ ಸಿಬಿ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಪಂದ್ಯಗಳಲ್ಲಿ ಸೋಲಲು ಬೌಲರ್ ಗಳೇ ಕಾರಣ. ಆದ್ದರಿಂದ ಬೆಂಗಳೂರಿನಲ್ಲಿ ಸಮಯಪ್ರಜ್ಞೆಯಿಂದ ಬೌಲಿಂಗ್ ಮಾಡಬಲ್ಲ ನಿರ್ದಿಷ್ಟ ರೀತಿಯ ಬೌಲರ್ ಗಳ ಕಡೆ ಗಮನ ಹರಿಸಲಾಗುವುದು ಎಂದು ಫ್ಲೆವರ್ ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments