ಬೆಂಗಳೂರು- ಸೇಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಬಳಿ ಭಾನುವಾರ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 7 ವರ್ಷದ ಮಗು ಮೃತಪಟ್ಟು, 7 ಮಂದಿ ಗಾಯಗೊಂಡಿದ್ದಾರೆ.
ಆರಂಭದಲ್ಲಿ ಟ್ರಕ್ ಡಿಕ್ಕಿ ಹೊಡೆದು ರಸ್ತೆ ಮಧ್ಯೆ ನಿಂತಿದೆ. ಈ ವೇಳೆ ಎರಡು ಕಾರುಗಳು ಮತ್ತು ಲಾರಿ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಈ ವೇಳೆ ಬೈಕ್ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.
5 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿವೆ. ಎರಡು ಟ್ರಕ್ ಗಳ ನಡುವೆ ಬೈಕ್ ಹಾಗೂ ಎರಡು ಕಾರುಗಳು ಸಿಲುಕು ನಜ್ಜುಗುಜ್ಜಾಗಿವೆ. ಘಟನೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಕ್ಲಿಯರ್ ಮಾಡಲಾಗಿದೆ ಎಂದು ಕೃಷ್ಣಗಿರಿ ಪೊಲೀಸ್ ಸೂಪರಿಟೆಂಡೆಂಟ್ ತಿಳಿಸಿದ್ದಾರೆ.
ಮೂವರು ಮೃತಪಟ್ಟಿರುವುದು ದೃಢಪಟ್ಟಿದ್ದು, ಮೃತಪಟ್ಟವರು ಕಾರಿನಲ್ಲಿ ಇದ್ದವರು ಎಂದು ಶಂಕಿಸಲಾಗಿದೆ. ಶವಗಳನ್ನು ಗುರುತು ಹಿಡಿಯುವ ಕೆಲಸ ನಡೆಯುತ್ತಿದೆ. ಅಪಘಾತದ ಕಾರಣ ತಿಳಿಯಲು ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದ್ದಾರೆ.


