ಭಟ್ಕಳ: ಮೀನುಗಾರಿಕೆಗೆ ತೆರಳಿದ ದೋಣಿಯೊಂದು ಸಮುದ್ರದಲ್ಲಿ ಅಲೆಗೆ ಸಿಲುಕಿ ಮುಳುಗಿದ ಪರಿಣಾಮ ನಾಲ್ವರು ಮೀನುಗಾರು ನಾಪತ್ತೆಯಾಗಿದ್ದು ಇಬ್ಬರನ್ನು ರಕ್ಷಣೆ ಮಾಡಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ರಕ್ಷಣೆಯಾದಾಗ ಮೀನುಗಾರನನ್ನು ಮನೋಹರ ಮೊಗೇರ ಹಾಗೂ ಬೆಳ್ನಿ ಮೂಲದ ರಾಮ ಖಾರ್ವಿ ಎಂದು ತಿಳಿದು ಬಂದಿದೆ. ನಾಪತ್ತೆಯಾದ ಮೀನುಗಾರರನ್ನು ಜಾಲಿಕೋಡಿ ರಾಮಕೃಷ್ಣ ಮೊಗೇರ, ಅಲ್ವೆಕೊಡಿ ಸತೀಶ ಮೊಗೇರ, ಮುಂಗ್ರಿ ಮನೆ ಗಣೇಶ ಮೊಗೇರ, ಕನ್ನಡ ಶಾಲೆ ನಿಶ್ಚಿತ ಮೊಗೇರ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಆರ್ವರು ಬುಧವಾರ ಮಧ್ಯಾಹ್ನ ಅಳ್ವೆಕೋಡಿ ಬಂದರ ಮೂಲಕ ಮಹಾಸತಿ ಗಿಲ್ನಟ್ ದೋಣಿ ಮೂಲಕ ಮೀನುಗಾರಿಕೆ ತೆರಳಿದ ವೇಳೆ ಸಮುದ್ರದ ಅಲೆಗೆ ಸಿಲುಕಿ ದೋಣಿ ಮುಳುಗಡೆಹಾಗಿದೆ. ಈ ವೇಳೆ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು. ನಾಲ್ವರು ನಾಪತ್ತೆಯಾಗಿದ್ದಾರೆ.
ರಕ್ಷಣೆಯಾದಾಗ ಇಬ್ಬರನ್ನು ಕರಾವಳಿ ಪಡೆ ಪಿಎಸ್ಐ ವೀಣಾ ಚಿತ್ರಪುರ ತಮ್ಮ ತಮ್ಮ ವಾಹನದ ಮೂಲಕ ಭಟ್ಕಳ ಸರ್ಕಾರಿ ಆಸ್ಪತ್ರೆ ದಾಖಲು ಮಾಡಿದ್ದಾರೆ. ಸದ್ಯ ನಾಪತ್ತೆಯಾದ ಮೀನುಗಾರರ ಶೋಧ ಕಾರ್ಯ ನಡೆಯುತ್ತಿದೆ.


