ನಾನು ಚಿಕ್ಕಮಗಳೂರು ನಗರಸಭೆ ಅಧ್ಯಕ್ಷನಾಗಿದ್ದ ವೇಳೆಯಲ್ಲಿ 2,800 ನಾಯಿಗಳಿಗೆ ಮಾಂಸ ಹಾಕಿಸಿ ತೆಂಗಿನ ಮರ ಕೆಳಗೆ ಹೂತು ಹಾಕಿಸಿದ್ದೇನೆ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಪರಿಷತ್‌ನಲ್ಲಿ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ವಿಧಾನಪರಿಷತ್ ನಲ್ಲಿ ಬುಧವಾರ ಬೀದಿನಾಯಿಗಳಿಗೆ ಕಡಿವಾಣ ಹಾಕುವ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಕುರಿತು ಚರ್ಚೆ ವೇಳೆ ಪಾಲ್ಗೊಂಡ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಸುಪ್ರೀಂ ಕೋರ್ಟ್ ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ (NCR) ಎಲ್ಲಾ ಬೀದಿ ನಾಯಿಗಳನ್ನು ತೆಗೆದುಹಾಕಿ, ಅವುಗಳನ್ನು ಆಶ್ರಯ ತಾಣಗಳಿಗೆ ಕಳುಹಿಸುವಂತೆ ಆದೇಶಿಸಿದೆ. ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ವಿಧಾನ ಪರಿಷತ್ ಸದಸ್ಯರು, ಬೀದಿ ನಾಯಿಗಳನ್ನು ವಿಧಾನಸೌಧದ ಆವರಣದಿಂದ ತೆರವುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯರು (MLC) ಬೀದಿ ನಾಯಿಗಳ ಸಮಸ್ಯೆಯನ್ನು ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ. ಬೀದಿ ನಾಯಿಗಳು ಸಾರ್ವಜನಿಕರಿಗೆ ಅಪಾಯಕಾರಿಯಾಗಿವೆ. ಚಿಕ್ಕಮಗಳೂರಿನಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಚಿಕ್ಕಮಗಳೂರಿನಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಮಕ್ಕಳು ಮತ್ತು ವೃದ್ಧರಿಗೆ ತೊಂದರೆಯಾಗುತ್ತಿದೆ. ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಬೀದಿ ನಾಯಿಗಳ ದಾಳಿಯಿಂದ ರೇಬಿಸ್ ರೋಗ ಬರುತ್ತದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಚ್ಚುವುದು ತಪ್ಪಿಸಲು ಸಾಧ್ಯವಿಲ್ಲ. ನಾನು 2,800 ನಾಯಿಗಳನ್ನು ಸಾಯಿಸಿರುವುದಕ್ಕೆ ಸಾಕ್ಷಿಯಾಗಿದ್ದೇನೆ ಎಂದು ಹೇಳಿದರು.
ಮಕ್ಕಳು, ವೃದ್ಧರು ಯಾರನ್ನೂ ಬಿಡದೆ ನಾಯಿ ದಾಳಿ ಮಾಡುತ್ತಿವೆ. ನಮ್ಮ ನಿಮ್ಮ ಮಕ್ಕಳು, ಹೈಕೋರ್ಟ್ ನ್ಯಾಯಮೂರ್ತಿ ಮಕ್ಕಳು ಕಾರಿನಲ್ಲಿ ಹೋಗುವುದರಿಂದ ಸಮಸ್ಯೆ ಎದುರಾಗುವುದಿಲ್ಲ. ಸುಪ್ರೀಂಕೋರ್ಟ್‌ಗೆ ರಾಜ್ಯದ ಪರಿಸ್ಥಿತಿ ಕುರಿತು ಏಕೆ ನೀವು ತಿಳಿಸುವುದಿಲ್ಲ? ಒಂದು ಅರ್ಜಿ ಹಾಕಿ ತಿಳಿಸಿ. ನಾನು ಚಿಕ್ಕಮಗಳೂರು ನಗರಸಭೆ ಅಧ್ಯಕ್ಷನಾಗಿದ್ದ ವೇಳೆಯಲ್ಲಿ 2,800 ನಾಯಿಗಳಿಗೆ ಮಾಂಸ ಹಾಕಿಸಿ ತೆಂಗಿನ ಮರ ಕೆಳಗೆ ಹೂತು ಹಾಕಿಸಿದ್ದೇನೆ ಎಂದು ಅವರು ನುಡಿದರು.
“ನಾಯಿಗಳನ್ನು ಹೊರಹಾಕಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ,’ ಎಂದು ಎನ್.ರವಿಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಭೈರತಿ ಸುರೇಶ್, ‘ಅದು ದಿಲ್ಲಿಗೆ ಮಾತ್ರ ಎಂದು ಭೈರತಿ ಸುರೇಶ್ ಉತ್ತರಿಸಿದರು.
ನಾಯಿ ಸಂತತಿ ತಡೆಗೆ ದಾರಿಗಳನ್ನು ಹುಡುಕುತ್ತೇವೆ. ಹೆಚ್ಚಿಗೆ ಮಾತನಾಡಿದರೆ ಪ್ರಾಣಿದಯಾ ಸಂಘದವರು ತಕರಾರು ಮಾಡುತ್ತಾರೆ ಎಂದು ಸಚಿವ ರಹೀಂ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಭೋಜೇಗೌಡ, ಎಲ್ಲ ನಾಯಿಗಳನ್ನು ಸಂಘದವರ ಮನೆಗಳಿಗೆ ಬಿಟ್ಟುಬಿಡಿ ಎಂದರು.


