ರಾಜಸ್ಥಾನದಲ್ಲಿ ಬಿಸಿಗಾಳಿಗೆ ಜನರು ತತ್ತರಿಸುತ್ತಿದ್ದು, 7 ನಗರಗಳಲ್ಲಿ ದಾಖಲೆಯ ಬಿಸಿಗಾಳಿ ಕಾಣಿಸಿಕೊಂಡಿದೆ. ಇದರಿಂದ ಕೋಟಾದಲ್ಲಿ 21 ಮಂದಿ ಅಸಹಜ ಸಾವು ಸಂಭವಿಸಿದೆ.
ರಾಜಸ್ಥಾನ್ ರಾಜಧಾನಿ ಜೈಪುರದಲ್ಲಿ ದಾಖಲೆಯ 47 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ಉಳಿದೆಡೆ 46 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ 8 ವರ್ಷಗಳಲ್ಲೇ ಅತ್ಯಧಿಕ ಉಷ್ಣಾಂಶ ಎನ್ನಲಾಗಿದೆ.
ಕಳೆದ 48 ಗಂಟೆಗಳಲ್ಲಿ ಕೋಟಾದಲ್ಲಿ 21 ಮಂದಿ ಅಸಹಜ ಸಾವಿನಿಂದ ಮೃತಪಟ್ಟಿದ್ದಾರೆ. ಆದರೆ ಹೀಟ್ ಸ್ಟ್ರೋಕ್ ನಿಂದ ಕೇವಲ ಒಂದು ಸಾವು ಸಂಭವಿಸಿದ್ದು, ಉಳಿದ 20 ಮಂದಿ ಹೇಗೆ ಮೃತಪಟ್ಟಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಆದರೆ ಬಿಸಿಗಾಳಿಯಿಂದ ಮೃತಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.