ರಾಜಧಾನಿ ದೆಹಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ದೇಶದ ಇತಿಹಾಸದಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ.
ದೆಹಲಿಯಲ್ಲಿ ಬುಧವಾರ 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು ಕೇಂದ್ರ ಹವಾಮಾನ ಇಲಾಖೆಗೆ ತಲೆನೋವಾಗಿದ್ದು, ತಾಪಮಾಣ ಪ್ರಮಾಣದ ಅಂಕಿ-ಅಂಶ ದಾಖಲಾಗುವ ಉಪಕರಣಗಳು ಸರಿಯಾಗಿವೆಯೇ ಎಂದು ಪರಿಶೀಲಿಸಲು ನಿರ್ಧಿರಿಸಿದೆ.
ಮುಂಗೇಶ್ ಪುರದಲ್ಲಿ ಅಳವಡಿಸಲಾಗಿರುವ ಹವಾಮಾನ ಇಲಾಖೆಯ ಉಪಕರಣ ದೋಷಪೂರಿತವೇ ಅಥವಾ ಲೋಪವುಂಟಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ವರದಿ ಬಂದ ನಂತರವೇ ತಾಪಮಾನದ ವಿವರ ದೃಢಪಡಲಿದೆ ಎಂದು ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಮಹಾಪಾತ್ರ ತಿಳಿಸಿದ್ದಾರೆ.
ಮುಂಗೇಶ್ ಪುರದ ಹವಾಮಾನ ಕೇಂದ್ರದಲ್ಲಿ ಬುಧವಾರ 52.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದೆಹಲಿಯ ವಿವಿಧೆಡೆ 20 ಕಡೆ ಉಪಕರಣ ಅಳವಡಿಸಲಾಗಿದೆ. ನಗರದ 14 ಕಡೆ ಇರಿಸಲಾಗಿರುವ ಉಪಕರಣಗಳಲ್ಲಿ ಅತ್ಯಧಿಕ ಉಷ್ಣಾಂಶ ಪತ್ತೆಯಾಗಿದ್ದು, ಇದರ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು.