ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚೀನಾ ತನ್ನ ಅತ್ಯಾಧುನಿಕ ಜಿ-20 ಸ್ಪೇಥ್ ಯುದ್ಧ ವಿಮಾನವನ್ನು ಭಾರತದಿಂದ 150 ಕಿ.ಮೀ. ದೂರದ ಗಡಿಯಲ್ಲಿ ನಿಯೋಜಿಸಿದೆ. ಇದರಿಂದ ಉಭಯ ದೇಶಗಳ ನಡುವಣ ಉದ್ವಿಗ್ನತೆ ಹೆಚ್ಚಾಗಿದೆ.
ಈಶಾನ್ಯ ಭಾರತದ ಸಿಕ್ಕಿಂನಿಂದ 150 ಕಿ.ಮೀ. ದೂರದಲ್ಲಿ ಚೀನಾ ಹೊಸದಾಗಿ ನಿರ್ಮಿಸಿರುವ ಜಾಗದಲ್ಲಿ ಸ್ಪೇಥ್ ಯುದ್ಧ ವಿಮಾನವನ್ನು ನಿಯೋಜಿಸಿರುವುದು ಸ್ಯಾಟಲೈಟ್ ಚಿತ್ರಗಳಿಂದ ದೃಢಪಟ್ಟಿದೆ.
ಸ್ಯಾಟಲೈಟ್ ಚಿತ್ರಗಳನ್ನು ಪರಿಶೀಲನೆ ನಡೆಸಲಾಗಿದ್ದು, ಯುದ್ಧ ವಿಮಾನ ನಿಯೋಜನೆ ಸ್ಥಳ, ಕಾರಣಗಳ ಪತ್ತೆಗೆ ಶ್ರಮ ವಹಿಸಲಾಗುತ್ತಿದೆ. ಅಲ್ಲದೇ ಗುಪ್ತಚರ ಅಧಿಕಾರಿಗಳು ವಿವರಗಳನ್ನು ಕಲೆ ಹಾಕುತ್ತಿದ್ದಾರೆ.
ಟಿಬೆಟ್ ನ ಎರಡನೇ ಅತಿ ದೊಡ್ಡ ನಗರವಾದ ಶಿಗಸ್ಟೆಯಲ್ಲಿ ಸಮುದ್ರ ಮಟ್ಟದಿಂದ 12800 ಮೀಟರ್ ಎತ್ತರದಲ್ಲಿರುವ ವಿಮಾನ ನಿಲ್ದಾಣದ ಸಮೀಪ ಚೀನಾದ 6 ಜಿ-20 ಯುದ್ಧ ವಿಮಾನಗಳನ್ನು ನಿಲ್ಲಿಸಲಾಗಿದೆ. ಕೆಲವು ನಾಗರಿಕರನ್ನು ಸಾಗಿಸಲು ಹಾಗೂ ಕೆಲವು ಯುದ್ಧ ಮುಂತಾದವುಗಳಿಗೆ ಬಳಸುವಂತದ್ದಾಗಿದೆ.