ದೇಶದ ಹಲವು ನಗರಗಳಲ್ಲಿ ನಡೆದ ಸಂಯೋಜಿತ ದಾಳಿಯಲ್ಲಿ ಕೆಮಿಕಲ್ ಬಾಂಬ್ ತಯಾರಿಸುವಲ್ಲಿ ಸಿದ್ಧಹಸ್ತರಾಗಿದ್ದ ಹಾಗೂ ಯುವಕರನ್ನು ಉಗ್ರ ಸಂಘಟನೆಗಳಿಗೆ ಸೇರಲು ಪ್ರಚೋದಿಸುತ್ತಿದ್ದ ಐವರು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಲಾಗಿದೆ.
ಖಾಲಿಫತ್ ಮಾದರಿಯಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಸೇರಲು ಯುವಕರು ಸೆಳೆಯಲು ಪ್ರಯತ್ನಿಸುತ್ತಿದ್ದ ಐವರು ಐಸಿಸ್ ಉಗ್ರರನ್ನು ವಿವಿಧ ರಾಜ್ಯಗಳಲ್ಲಿ ಬಂಧಿಸಲಾಗಿದ್ದು, ಇದರಲ್ಲಿ ಕೆಲವರು ಪದವೀಧರರೂ ಆಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರಗಾಮಿ ಸಂಘಟನೆಗಳು ಸ್ಲೀಪರ್ ಸೆಲ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಆಶರ್ ದಾನಿಶ್, ಅಫ್ತಾಬ್ ಮತ್ತು ಸುಫಿಯಾನ್ ಅವರನ್ನು ಗುರುತಿಸಲಾಗಿದೆ. ಇವರು ಸ್ಥಳೀಯವಾಗಿ ಬಾಂಬ್ ತಯಾರಿಸುವಲ್ಲಿ ಸಿದ್ಧಹಸ್ತರಾಗಿದ್ದರು.
ಉಗ್ರರನ್ನು ದೆಹಲಿ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಅಫ್ತಾಬ್ ಮತ್ತು ಅಯೂಬ್ ಮುಂಬೈನಲ್ಲಿ ನೆಲೆಸಿದ್ದು, ಇವರನ್ನು ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದ ಬಳಿ ಬಂಧಿಸಲಾಗಿದೆ. ಅಶರ್ ದಾನಿಶ್ ನನ್ನು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕಮ್ರಾನ್ ಖುರೇಷಿಯನ್ನು ಮಧ್ಯಪ್ರದೇಶದ ರಾಜ್ ಘಡ್ ನಲ್ಲಿ ಹಾಗೂ ಹುಸೈಫ್ ಯೆಮೆನ್ ಎಂಬಾತನನ್ನು ತೆಲಂಗಾಣದಲ್ಲಿ ಬಂಧಿಸಲಾಗಿದೆ.
ಖಿಲಾಫತ್ ಮಾದರಿ ಅಂದರೇನು?
ಖಿಲಾಫತ್ ಮಾದರಿ ಅಂದರೆ ಸಂಘಟನೆಯ ಉಗ್ರರು ಒಂದು ಪ್ರದೇಶವನ್ನು ಆಕ್ರಮಿಸಿಕೊಂಡು ನಂತರ ಆ ಪ್ರದೇಶದ ಜನರನ್ನೇ ಬಳಸಿಕೊಂಡು ಜಿಹಾದ್ ಹೋರಾಟ ನಡೆಸುತ್ತಾರೆ. ಇದು ಪಾಕಿಸ್ತಾನದ ಮೂಲದ ತಂತ್ರಗಾರಿಕೆ ಆಗಿದೆ.
ಉಗ್ರರು ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನದಲ್ಲಿ ನೆಲೆಸಿರುವ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ದಾನಿಶ್ ಇಂಗ್ಲೀಷ್ ವಿಭಾಗದಲ್ಲಿ ಪದವೀಧರನಾಗಿದ್ದು, ಸ್ಲೀಪರ್ ಸೆಲ್ ಘಟಕದ ಮುಖ್ಯಸ್ಥನಾಗಿದ್ದ. ಗ್ವಾಜಾ ಎಂಬ ಸಂಕೇತ ಭಾಷೆಯಲ್ಲಿ ವ್ಯವಹರಿಸುತ್ತಿದ್ದ. ರಾಂಚಿಯ ಹೋಟೆಲ್ ನಲ್ಲಿ ತಂಗಿದ್ದಾಗ ಈತನನ್ನು ಬಂಧಿಸಲಾಗಿತ್ತು. ಜನವರಿಯಲ್ಲಿ ರಾಂಚಿಗೆ ಬಂದಿದ್ದ ಈತ ಬಾಂಬ್ ತಯಾರಿಸುವುದಲ್ಲಿ ನಿಸ್ಸೀಮನಾಗಿದ್ದ ಎಂದು ಹೇಳಲಾಗಿದೆ.
ಬಂಧಿತರಿಂದ ಒಂದು ಪಿಸ್ತೂಲ್ ಮತ್ತು ಹಲವಾರು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ಯಾನಿಶ್ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವಲ್ಲಿ ಪರಿಣಿತ. ಈ ಉದ್ದೇಶಕ್ಕಾಗಿ ಅವರು ಬಳಸಿದ ವಸ್ತುಗಳು ಮತ್ತು ರಾಸಾಯನಿಕಗಳನ್ನು ಅವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ” ಎಂದು ಮೂಲವೊಂದು ತಿಳಿಸಿದೆ.
“ಗುಂಪಿಗೆ ಒಂದು ಪ್ರಮುಖ ಜವಾಬ್ದಾರಿ ವಹಿಸಲಾಗಿತ್ತು ಎಂದು ಹೇಳಲಾಗಿದ್ದು, ಬಂಧಿತರ ಬಳಿಯಿಂದ ಹೆಚ್ಚಿನ ಪ್ರಮಾಣದ ರಾಸಾಯನಿಕಗಳು ಮತ್ತು ಶಸ್ತ್ರಾಸ್ತ್ರಗಳ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ರಾಸಾಯನಿಕಗಳಲ್ಲಿ ಹೈಡ್ರೋಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಸೋಡಿಯಂ ಬೈಕಾರ್ಬನೇಟ್, ಸಲ್ಫರ್ ಪೌಡರ್, pH ಮೌಲ್ಯ ಪರೀಕ್ಷಕ ಮತ್ತು ಬಾಲ್ ಬೇರಿಂಗ್‌ಗಳು ಸೇರಿವೆ. ಅಲ್ಲದೆ, ಲ್ಯಾಪ್ ಟಾಪ್, ಮೊಬೈಲ್ ಫೋನ್, ತೂಕದ ಯಂತ್ರ, ಬೀಕರ್ ಸೆಟ್, ಸುರಕ್ಷತಾ ಕೈಗವಸುಗಳು, ಉಸಿರಾಟದ ಮುಖವಾಡಗಳು, ಮದರ್‌ಬೋರ್ಡ್ ಹೊಂದಿರುವ ಪ್ಲಾಸ್ಟಿಕ್ ಕಂಟೇನರ್, ತಂತಿಗಳು ಇತ್ಯಾದಿ) ಸಹ ವಶಪಡಿಸಿಕೊಳ್ಳಲಾಗಿದೆ.


