180 ಕೆಜಿ ಡ್ರಗ್ಸ್ ಸಾಗಿಸುತ್ತಿದ್ದ ಮಿನಿ ವಿಮಾನವೊಂದು ಕಬ್ಬಿನ ಗದ್ದೆಯಲ್ಲಿ ಪತನಗೊಂಡ ಪರಿಣಾಮ ಪೈಲೆಟ್ ಮೃತಪಟ್ಟ ಘಟನೆ ಬ್ರೆಜಿಲ್ ನಲ್ಲಿ ಸಂಭವಿಸಿದೆ.
ಸೆಪ್ಟೆಂಬರ್ 14ರಂದು ಕರಾವಳಿ ತೀರದ ಸಲ್ವಾಡೋರ್ ನಲ್ಲಿ ಈ ಘಟನೆ ನಡೆದಿದ್ದು, ಸ್ಪೆಸ್ ಎಕ್ಸ್ ಹೆಸರಿನಲ್ಲಿ ನಕಲಿ ಗುರುತಿನಲ್ಲಿ ಮುಚ್ಚಿದ ಬಾಕ್ಸ್ ಗಳಲ್ಲಿ ಕೊಕೆನ್ ಸಾಗಿಸಲಾಗುತ್ತಿತ್ತು.
ಮೃತಪಟ್ಟ ಪೈಲೆಟ್ ಜೇಮ್ಸ್ ಕ್ಲರ್ಕ್ ಆಸ್ಟ್ರೇಲಿಯಾ ಮೂಲದವರಾಗಿದ್ದು, 20 ವರ್ಷಗಳ ಕಾಲ ಪೈಲೆಟ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕಳ್ಳಸಾಗಾಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.
ಫೆಡರಲಿ ಇನ್ವೆಸ್ಟಿಗೇಷನ್ ಸಂಸ್ಥೆ ವಿಮಾನದ ವಿವರಗಳನ್ನು ಬಹಿರಂಗಪಡಿಸಿಲ್ಲ. ಅಲ್ಲದೇ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದು, ಇದೇ ಮೊದಲ ಬಾರಿಗೆ ವಿಮಾನದ ಮೂಲಕ ಭಾರೀ ಪ್ರಮಾಣದ ಡ್ರಗ್ಸ್ ಸಾಗಾಟ ಪತ್ತೆಯಾಗಿದೆ.


