ತೀವ್ರ ಕುತೂಹಲ ಕೆರೆಳಿಸಿದ್ದ ರಿಷಭ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ ಕಾಂತಾರಾ ಚಾಪ್ಟರ್-1 ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
2 ನಿಮಿಷದ 57 ಸೆಕೆಂಡ್ ಗಳ ಟ್ರೇಲರ್ ಸೋಮವಾರ ಬೆಳಿಗ್ಗೆ 12.30ಕ್ಕೆ ಬಿಡುಗಡೆ ಆಗಿದ್ದು, ದುಷ್ಟ ಶಕ್ತಿಗಳು ಅಟ್ಟಹಾಸ ಮೆರೆಯುವಾಗ ದೇವರು ಮನುಷ್ಯನ ರೂಪದಲ್ಲಿ ಅವತರಿಸುತ್ತಾನೆ ಎಂದು ಹೇಳುವ ಮೂಲಕ ದೈವದ ಮುಂದುವರಿದ ಕತೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಕಾಂತಾರ ಚಿತ್ರ ಇತ್ತೀಚಿನ ಜನಜೀವನ ಕುರಿತ ಕತೆಯನ್ನಾಧರಿಸಿತ್ತು. ರಿಷಭ್ ಶೆಟ್ಟಿ ಹೇಳಿದಂತೆ ಕಾಂತಾರಾ ಚಾಪ್ಟರ್ -1 ಚಿತ್ರ ಶತಮಾನಗಳ ಹಿಂದಿನ ರಾಜರ ಕತೆಯನ್ನು ಆಧಿರಿಸಿದ್ದು, ದಟ್ಟ ಕಾಡಿನ ನಡುವೆ ನಡೆಯತ್ತದೆ. ಅಲ್ಲದೇ ಈ ಚಿತ್ರದಲ್ಲೂ ಯುದ್ಧವನ್ನು ಚಿತ್ರಿಕರಿಸಲಾಗಿದ್ದು, ನಿರೀಕ್ಷೆಗೂ ಮೀರಿ ಚಿತ್ರ ಮೂಡಿ ಬಂದಿರುವುದಕ್ಕೆ ಸಾಕ್ಷಿಯಾಗಿದೆ.
ಕಾಂತಾರಾ ಚಾಪ್ಟರ್ -1 ಚಿತ್ರ ಅಕ್ಟೋಬರ್ 2ರಂದು ದೇಶದಾದ್ಯಂತ ಬಿಡುಗಡೆ ಆಗಲಿದ್ದು, ಟ್ರೇಲರ್ ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಬಿಡಗಡೆ ಆಗಿದೆ.


