ಶತಕೋಟ್ಯಾಧಿಪತಿ ಗೌತಮ್ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ಎಂಬ ಪಟ್ಟವನ್ನು ಮರಳಿ ಅಲಂಕರಿಸಿದ್ದಾರೆ.
ತಮ್ಮದೇ ದೇಶದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕುವ ಮೂಲಕ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಏಷ್ಯಾದ ನಂ.1 ಶ್ರೀಮಂತ ಪಟ್ಟ ಅಲಂಕರಿಸಿದ್ದಾರೆ.
ಗೌತಮ್ ಅದಾನಿ ಒಟ್ಟಾರೆ ಆಸ್ತಿ 111 ಶತಕೋಟಿ ಡಾಲರ್ ದಾಟಿದ್ದು, ಮುಖೇಶ್ ಅಂಬಾನಿ ಅವರ 109 ಶತಕೋಟಿ ಡಾಲರ್ ಆದಾಯವನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ವಿಶ್ವದ ಅಗ್ರ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.
ಅದಾನಿ ಗ್ರೂಪ್ಸ್ ಕಳೆದ ಒಂದು ವರ್ಷದಲ್ಲಿ 1.23 ಲಕ್ಷ ಕೋಟಿ ಡಾಲರ್ ಆದಾಯ ಹೆಚ್ಚಿಸಿಕೊಂಡು 17.94 ಲಕ್ಷ ಕೋಟಿಗೆ ಏರಿಸಿಕೊಂಡಿದೆ.