ರಿಯಲ್ ಮ್ಯಾಡ್ರಿಡ್ ತಂಡ ದಾಖಲೆಯ 15ನೇ ಬಾರಿ ಯುರೋಪಿಯನ್ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸ್ಪೇನ್ ಮೂಲದ ರಿಯಲ್ ಮ್ಯಾಡ್ರಿಡ್ ಕ್ಲಬ್ ಶನಿವಾರ ತಡರಾತ್ರಿ ನಡೆದ ಡ್ರೊಟ್ ಮಂಡ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದು ಒಟ್ಟಾರೆ 15 ಬಾರಿ ಹಾಗೂ ಕಳೆದ 11 ಆವೃತ್ತಿಗಳಲ್ಲಿ ಗೆದ್ದ 6ನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.
ಮ್ಯಾಡ್ರಿಡ್ ಪರ ಕರ್ವಜಲ್ ಮತ್ತು ವಿನಿಸ್ಯೂಸ್ ತಲಾ ಒಂದು ಗೋಲು ಬಾರಿಸಿ ಗೆಲುವಿನ ರೂವಾರಿಗಳಾದರು. ಡ್ರೊಟ್ ಮಂಡ್ ತಂಡದ 2ನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಯಿತು.
ಮ್ಯಾಡ್ರಿಡ್ ತಂಡ ಇಡೀ ಟೂರ್ನಿಯಲ್ಲಿ ಆಡಿದ 54 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಸೋಲುಂಡಿತ್ತು. ಅಲ್ಲದೇ ಬಲಿಷ್ಠ ಬಾರ್ಸಿಲೋನಾ ವಿರುದ್ಧ 4-1ರಿಂದ ಅಧಿಕಾರಯುತ ಗೆಲುವು ದಾಖಲಿಸಿ ಫೈನಲ್ ನಲ್ಲಿ ಹಾಟ್ ಫೇವರಿಟ್ ಆಗಿ ಕಣಕ್ಕಿಳಿದಿತ್ತು.