ಜನವರಿ 1 ರಿಂದ ಇಲ್ಲಿಯವರೆಗೆ ಕಳೆದ 10 ತಿಂಗಳಲ್ಲಿ ಬೆಂಗಳೂರು ಪೊಲೀಸರು 35 ವಿದೇಶಿ ಪ್ರಜೆಗಳು ಸೇರಿದಂತೆ 1048 ಆರೋಪಿಗಳನ್ನು ಬಂಧಿಸಿ 81.21 ಕೋಟಿರೂ. ಮೌಲ್ಯದ ನಿಷೇದಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಡ್ರಗ್ಸ್ ಮಾರಾಟ ಸರಬರಾಜು,ಶೇಖರಣೆ, ಸೇವನೆ ಸೇರಿದಂತೆ 771 ಪ್ರಕರಣಗಳಲ್ಲಿ 1486.55 ಕೆಜಿ ವಿವಿಧ ಮಾದಕ ವಸ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ.ಡ್ರಗ್ ಪೆಡ್ಲರ್‌ಗಳು, ವಿತರಕರು ಮತ್ತು ಅಂತರರಾಜ್ಯ ಜಾಲಗಳ ವಿರುದ್ಧ ಗುರುತರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಸೋಶಿಯಲ್ ಮೀಡಿಯಾ ನಿಗಾ
ನಿಷೇದಿತ ಮಾದಕ ವಸ್ತು ಮಾರಾಟ ಅಥವಾ ಪ್ರಚಾರಕ್ಕಾಗಿ ಬಳಸಲಾಗುವ ರ್ಸೇಸ್ ವೆಬ್ ಮತ್ತು ಡಾರ್ಕ್‌ನೆಟ್ ವೇದಿಕೆಗಳ ಕುರಿತು ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತವೆ.
ಎಲ್ಲಾ ವಿಭಾಗಗಳು, ಶಾಖೆಗಳು (ಸಿಸಿಬಿ, ನಾಗರಿಕ ಪೊಲೀಸ್, ಸಿಇಆರ್, ಪೊಲೀಸ್ ಶ್ವಾನದಳ, (ಸೋಕೋ) ಎಸ್.ಒ.ಸಿ.ಒ) ಒಕ್ಕೂಟವಾಗಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲು ಕೇಂದ್ರೀಕೃತ ಮತ್ತು ವಿತರಿತ ಪ್ರಯತ್ನಗಳನ್ನು ಕೈಗೊಂಡಿವೆ
ನಕಾಬಂದಿ ಪ್ರದೇಶ
ಅನಿಯಮಿತವಾಗಿ ಸ್ಥಾಪಿಸಲಾದ ನಕಾಬಂದಿ ತಪಾಸಣೆ ಕೇಂದ್ರಗಳು ಮತ್ತು ಪ್ರದೇಶ ಆಧಿಪತ್ಯ ಅಭ್ಯಾಸಗಳಿಂದ ಪೆಡ್ಲರ್‌ಗಳ ವಿರುದ್ಧ ಕ್ರಮಕ್ಕೆ ಅಮೂಲ್ಯವಾದ ಮಾಹಿತಿ ದೊರೆತಿರುತ್ತದೆ.
ಮಾನವ ಗುಪ್ತಚರ ಮತ್ತು ತಾಂತ್ರಿಕ ಮೂಲಗಳನ್ನು ಬಳಸಿಕೊಂಡು, ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವುದು ಮತ್ತು ತಡೆಗಟ್ಟುವುದು.
ಸಂಸ್ಥಾಂತರ ಸಂಯೋಜನೆ
ಎ್‌ಆರ್‌ಆರ್‌ಒ, ಡಿಆರ್‌ಐ, ಎನ್‌ಸಿಬಿ ಮತ್ತು ಇತರ ಸಂಸ್ಥೆಗಳೊಂದಿಗೆ ನೇರ ಮಾಹಿತಿಯ ವಿನಿಮಯ ಮತ್ತು ಸಂಯುಕ್ತ ಕಾರ್ಯಾಚರಣೆ. ವಿದೇಶಿ ಪ್ರಜೆಗಳು ತಮ ನಿವಾಸಗಳಲ್ಲಿ ವಾಸಿಸುತ್ತಿರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡದ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಇದರಿಂದ ತಮ ತಮ ಆವರಣ,ಸ್ಥಳಗಳಲ್ಲಿ ಮಾದಕ ವಸ್ತು ಹರಡುವುದಕ್ಕೆ ಬಳಸುವುದನ್ನು ತಡೆಗಟ್ಟಲಾಗುತ್ತದೆ.
ಸಮುದಾಯ ಸಹಭಾಗಿತ್ವ
ಶಾಲೆಗಳು, ಕಾಲೇಜುಗಳು, ಎನ್‌ಜಿಒಗಳು ಮತ್ತು ನಾಗರಿಕ ಸಂಘಟನೆಗಳ ಸಹಕಾರದೊಂದಿಗೆ ಜಾಗೃತಿ ಅಭಿಯಾನಗಳು ಮತ್ತು ಮಾದಕ ವಸ್ತು ದುರ್ಬಳಕೆಯನ್ನು ತಡೆಯಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿವೆ.ಮಾದಕ ವಸ್ತು ದುರ್ಬಳಕೆ, ಪ್ರೋತ್ಸಾಹ ಅಥವಾ ಪರೋಕ್ಷವಾಗಿ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಬೆಂಗಳೂರನ್ನು ಸುಭದ್ರ ಮತ್ತು ಮಾದಕ ಮುಕ್ತ ನಗರವಾಗಿಸೋಣ ಹಾಗಾಗಿ ಸಾರ್ವಜನಿಕರೆಲ್ಲರೂ ಸಹಕರಿಸುವಂತೆ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಮನವಿ ಮಾಡಿದ್ದಾರೆ.


