2024ರ ಲೋಕಸಭಾ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಭಾರೀ ಜಿಗಿತ ಕಂಡಿದ್ದು, ಒಂದೇ ದಿನದಲ್ಲಿ 4 ವರ್ಷಗಳಲ್ಲೇ ಗರಿಷ್ಠ ಮಟಕ್ಕೇರಿ ದಾಖಲೆ ಬರೆದಿದೆ.
ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ ಡಿಎ ಈ ಬಾರಿ ಸ್ಥಿರ ಆಡಳಿತ ನಡೆಯಲಿದೆ ಎಂದು ವರದಿ ನೀಡಿದ್ದವು. ಇದರ ಬೆನ್ನಲ್ಲೇ ಸೋಮವಾರ ಬೆಳಿಗ್ಗೆ ಮುಂಬೈನ ಷೇರು ಮಾರುಕಟ್ಟೆ ವಹಿವಾಟು ಆರಂಭಿಸುತ್ತಿದ್ದಂತೆ 30 ಕಂಪನಿಗಳ ಷೇರುಗಳು ಗರಿಷ್ಠ 2000 ಅಂಕ ದಾಟಿವೆ.
ಬ್ಯಾಂಕಿಂಗ್ ಕ್ಷೇತ್ರದ ಷೇರುಗಳ ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದಾರೆ. ಇದರಿಂದ ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರು 12.48 ಲಕ್ಷ ಕೋಟಿ ರೂ. ಆದಾಯ ಗಳಿಸಿದ್ದಾರೆ.
ಸೆನ್ಸೆಕ್ಸ್ ಮತ್ತು ನಿಫ್ಟಿಯ ಎಲ್ಲಾ ಷೇರುಗಳು ದಾಖಲೆ ಮಟ್ಟಕ್ಕೆ ಏರಿಕೆಯಾಗಿ ಹೊಸ ದಾಖಲೆಯನ್ನೇ ಬರೆದಿದೆ. ನಿಫ್ಟಿ 800 ಅಂಕ ಅಥವಾ ಶೇ.3.58ರಷ್ಟು ಜಿಗಿತ ಕಂಡರೆ, ಸೆನ್ಸೆಕ್ಸ್ 23,227.90ರಿಂದ 2,621,98ಕ್ಕೆ ಅಂದರೆ ಶೇ.3.55ರಷ್ಟು ಏರಿಕೆಯಾಗಿದೆ.