ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದಂತೆ ಸಮೀಕ್ಷೆ ವರದಿಗಳು ಸುಳ್ಳಾಗಿ ವ್ಯತಿರಿಕ್ತ ಫಲಿತಾಂಶ ಸೂಚನೆ ಬರುತ್ತಿದ್ದಂತೆ ಷೇರು ಮಾರುಕಟ್ಟೆ ಪ್ರಪಾತಕ್ಕೆ ಕುಸಿದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 400ಕ್ಕೂ ಅಧಿಕ ಸ್ಥಾನ ಗೆಲ್ಲುವ ಭರವಸೆ ವ್ಯಕ್ತಪಡಿಸಿತ್ತು. ಸಮೀಕ್ಷೆಗಳು 350ಕ್ಕೂ ಅಧಿಕ ಸ್ಥಾನ ದೊರೆಯಲಿವೆ ಎಂದು ಹೇಳಿತ್ತು. ಆದರೆ ಮತ ಎಣಿಕೆ ನಡೆಯುತ್ತಿದ್ದಂತೆ ಎನ್ ಡಿಎ ಮೈತ್ರಿಕೂಟ 300 ಗಡಿ ದಾಟುವುದು ಕೂಡ ಕಷ್ಟವಾಗಿದೆ. ಮತ್ತೊಂದೆಡೆ ಇಂಡಿಯಾ ಮೈತ್ರಿಕೂಟ 233 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅಚ್ಚರಿ ಮುನ್ನಡೆ ಸಾಧಿಸಿದೆ.
ಮಂಗಳವಾರ ಷೇರು ಮಾರುಕಟ್ಟೆ ಶೇ. 5.81ರಷ್ಟು ಅಂದರೆ 6000 ಅಂಕ ಕುಸಿದಿದೆ.ನಿಷ್ಟಿ ಕೂಡ 1400 ಅಂಕ ಕುಸಿತ ಕಂಡಿದೆ.
ಸಮೀಕ್ಷೆಗಳ ವರದಿ ಹೊರಗೆ ಬೀಳುತ್ತಿದ್ದಂತೆ 2000 ಅಂಕ ಜಿಗಿತ ಕಂಡಿದ್ದ ಷೇರು ಮಾರುಕಟ್ಟೆಯಿಂದ ಹೂಡಿಕೆದಾರರು 12 ಲಕ್ಷ ಕೋಟಿ ನಷ್ಟ ಮಾಡಿಕೊಂಡಿದ್ದರು. ಇದೀಗ ಸಮೀಕ್ಷೆ ವರದಿ ಉಲ್ಟಾ ಆಗುತ್ತಿದ್ದಂತೆ ಎರಡು ಪಟ್ಟು ಹಣ ಕಳೆದುಕೊಂಡಿದ್ದಾರೆ.