Thursday, December 25, 2025
Google search engine
Homeರಾಜ್ಯ7 ನಿಗಮ ಮಂಡಳಿ ಮುಚ್ಚಲು ಆಡಳಿತ ಸುಧಾರಣಾ ಆಯೋಗ ಶಿಫಾರಸು!

7 ನಿಗಮ ಮಂಡಳಿ ಮುಚ್ಚಲು ಆಡಳಿತ ಸುಧಾರಣಾ ಆಯೋಗ ಶಿಫಾರಸು!

ಜನತೆಗೆ ಯಾವುದೇ ಪ್ರಯೋಜನ ಆಗ 7 ಮಂಡಳಿಗಳನ್ನು ಮುಚ್ಚಬೇಕು ಹಾಗೂ 9 ಕಾರ್ಪೊರೇಷನ್ ಗಳನ್ನು ವಿಲೀನಗೊಳಿಸಬೇಕು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ನಿಗಮ ಮಂಡಳಿಗಳ ಆಡಳಿತ ಸುಧಾರಣೆ ವರದಿ ನೀಡಲಾಗಿದೆ ಎಂದರು.

ಆಡಳಿತ ಸುಧಾರಣಾ ಆಯೋಗ ಸಲ್ಲಿಸಿದ 9ನೇ ವರದಿಯಲ್ಲಿ 449 ಹೊಸ ಶಿಫಾರಸುಗಳನ್ನು ಮಾಡಲಾಗಿದೆ. ಇದರಲ್ಲಿ 3 ಪ್ರಮುಖ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ವರದಿ ನೀಡಲಾಗಿದೆ ಎಂದರು.

ಪ್ರಮುಖವಾಗಿ ಈ ವರದಿಯಲ್ಲಿ 7 ಬೋರ್ಡ್, ಕಾರ್ಪೊರೇಷನ್‌ಗಳನ್ನು ಮುಚ್ಚಲು ಸಲಹೆ ನೀಡಲಾಗಿದೆ. 9 ಬೋರ್ಡ್ ಕಾರ್ಪೊರೇಷನ್‌ಗಳನ್ನ ವಿಲೀನ ಮಾಡಲು ಶಿಫಾರಸು ‌ಮಾಡಲಾಗಿದೆ.

ನಿಗಮ- ಮಂಡಳಿಗಳಿಗೆ ಈಗಾಗಲೇ ಅಧ್ಯಕ್ಷರನ್ನ ನೇಮಕ ಮಾಡಿರುವುದು ನಮಗೆ ಸಂಬಂಧವಿಲ್ಲದ ವಿಷಯ. ಜನರ ಹಣದ ಉಪಯೋಗ ಜನರಿಗೆ ಆಗಬೇಕು. ಇವತ್ತಿನ ಕಾಲದಲ್ಲಿ ಅವಶ್ಯಕತೆ ಇಲ್ಲದ ಬೋರ್ಡ್ ಮುಚ್ಚಲು ಹೇಳಿದ್ದೇವೆ ಎಂದು ಅವರು ಹೇಳಿದರು.

ನನ್ನ ಜವಾಬ್ದಾರಿ ನಾನು ಮಾಡಿದ್ದೇನೆ. ಸಿಎಂ ವರದಿಯನ್ನು ಅಂಗೀಕಾರ ಮಾಡುವುದು ಬಿಡುವುದು ಅಥವಾ ಅನುಷ್ಠಾನಕ್ಕೆ ತರುವುದು ನಮ್ಮ ಕೈಯಲ್ಲಿ ಇಲ್ಲ. ಆದರೆ ಸಿಎಂ ವರದಿಯನ್ನು ಅಂಗೀಕಾರ ಮಾಡುವುದಾಗಿ ಹೇಳಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

84 ನಿಗಮ ಮಂಡಳಿಗಳನ್ನು ಸಮಗ್ರವಾಗಿ ಪರಾಮರ್ಶೆ ಮಾಡಿದ್ದೇವೆ. ಇದರಲ್ಲಿ 7 ಮುಚ್ಚಲು, 9 ವಿಲೀನಗೊಳಿಸಲು ಶಿಫಾರಸು ಮಾಡಿದ್ದೇವೆ.  ಕೆಲಸವೇ ಇಲ್ಲದೇ ಇರುವ ನಿಗಮ ಮಂಡಳಿಗಳನ್ನು ಮುಚ್ಚಲು ಸೂಚಿಸಿದ್ದೇವೆ. ಕೆಲವು ಮಂಡಳಿಗಳಲ್ಲಿ ಹಣವೇ ಇಲ್ಲ ಎಂದು ದೇಶಪಾಂಡೆ ವಿವರಿಸಿದರು.

ನಿಗಮ ಮಂಡಳಿಗಳ ಅಭಿವೃದ್ಧಿ, ಸುಧಾರಣೆ ಹೇಗೆ ಮಾಡಬೇಕು ಅಂತ 379 ಶಿಫಾರಸು ಮಾಡಿದ್ದೇವೆ. 15 ಶಿಫಾರಸು ಭೂಸ್ವಾಧೀನ ಮಾಡಿದ್ದೇವೆ. ಸಾಮಾನ್ಯ ಆಡಳಿತಾತ್ಮಕ-ಇ ಸುಧಾರಣೆಗೆ 55 ಶಿಫಾರಸು ಮಾಡಿದ್ದೇವೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಮುಚ್ಚಲು ಶಿಫಾರಸು ಮಾಡಲಾದ 7 ನಿಗಮ ಮಂಡಳಿಗಳು

1.ಕರ್ನಾಟಕ ರಾಜ್ಯ ಸಮಾಜಕಲ್ಯಾಣ ಮಂಡಳಿ

2.ಕರ್ನಾಟಕ ರಾಜ್ಯ ಸಂಯಮ ಮಂಡಳಿ

3.ಕರ್ನಾಟಕ ಸಹಕಾರಿ ಕೋಳಿ ಸಾಕಾಣಿಕೆ ಒಕ್ಕೂಟ

4.ಕರ್ನಾಟಕ ವುಲ್ಪ್ ವುಡ್ ಲಿಮಿಟೆಡ್

5.ಕರ್ನಾಟಕ ರಾಜ್ಯ ಅಗ್ರೋ-ಕಾರ್ನ್ ಪ್ರಾಡಕ್ಟ್ ಲಿಮಿಟೆಡ್

  1. ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್

7.ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್

ವಿಲೀನಕ್ಕೆ ಸೂಚಿಸಿರುವ ನಿಗಮಗಳು

1.ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿ

(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೋಂದಿಗೆ ವೀಲಿನ)

2.ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ ನಿಯಮಿತ

(ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್ ವಿಲೀನ ಮಾಡಬೇಕು)

3.ಆಹಾರ ಕರ್ನಾಟಕ ಲಿಮಿಟೆಡ್

(ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತದಲ್ಲಿ ವಿಲೀನ)

4.ಬೆಂಗಳೂರು ಸಬ್ ಅರ್ಬನ್ ರೈಲ್ವೆ ಕಂಪನಿ ಲಿಮಿಟೆಡ್ (ಬಿ-ರೈಡ್)

(ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್))

5.ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ

(ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ)

6.ಮೈಸೂರು ಕ್ರೋಮ್ ಟ್ಯಾನಿಂಗ್ ಕಂಪನಿ ಲಿಮಿಟೆಡ್

(ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್‌ನಲ್ಲಿ ವಿಲೀನ)

7.ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ

(ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ)

8.ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಜಿಕೆವಿಕೆ)

9.ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಸಿಎಡಿಎ)

(ಸಂಬಂಧಿಸಿದ ನೀರಾವರಿ ನಿಗಮಗಳು)

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments