2024 ಲೋಕಸಭಾ ಚುನಾವಣೆಯಲ್ಲಿ ಸಮೀಕ್ಷೆಗಳ ವರದಿ ವ್ಯತಿರಿಕ್ತವಾಗಿ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಗೆ ಕಸರತ್ತು ಆರಂಭಗೊಂಡಿದೆ.
ನಿರೀಕ್ಷೆಗೂ ಮೀರಿ 231 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಇಂಡಿಯಾ ಮೈತ್ರಿಕೂಟ ಬಹುಮತಕ್ಕೆ ಬೇಕಿದ್ದ 272 ಸ್ಥಾನಕ್ಕಾಗಿ ಕಸರತ್ತು ಆರಂಭಿಸಿದೆ. ಜೆಡಿಯು, ತೆಲುಗುದೇಶಂ ಸೇರಿದಂತೆ ವಿವಿಧ ಪಕ್ಷಗಳನ್ನು ಸಂಪರ್ಕಿಸುತ್ತಿರುವ ಕಾಂಗ್ರೆಸ್ ಭರ್ಜರಿ ಆಫರ್ ಗಳನ್ನು ಒಡ್ಡುತ್ತಿದೆ.
ನಿತೀಶ್ ಕುಮಾರ್ ಗೆ ಉಪ ಪ್ರಧಾನಿ ಪಟ್ಟ, ತೆಲುಗು ದೇಶಂಗೆ ಅಮರಾವತಿ ರಾಜಧಾನಿ ಮಾಡಲು ವಿಶೇಷ ಅನುದಾನ ನೀಡಲಿದ್ದು, ಸರ್ಕಾರ ರಚನೆಗೆ ಬೆಂಬಲ ನೀಡುವಂತೆ ಆಹ್ವಾನ ನೀಡಿದೆ. ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಈ ಎರಡೂ ಪಕ್ಷಗಳು ನಿಲುವು ಅಧಿಕೃತವಾಗಿ ಪ್ರಕಟಿಸಿಲ್ಲ.
ಕಾಂಗ್ರೆಸ್ ಎನ್ ಡಿಎ ಮೈತ್ರಿಕೂಟದ ಪಕ್ಷಗಳನ್ನು ಸಂಪರ್ಕಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಲರ್ಟ್ ಆಗಿದ್ದು, ಮಿತ್ರಪಕ್ಷಗಳ ಮುಖಂಡರನ್ನು ದೆಹಲಿಗೆ ಆಹ್ವಾನಿಸಿ ಮಾತುಕತೆ ನಡೆಸಲು ಮುಂದಾಗಿದೆ. ಈ ಮೂಲಕ 3ನೇ ಬಾರಿ ಸರ್ಕಾರ ರಚನೆಗೆ ಬಿಜೆಪಿ ಪ್ರಯತ್ನಿಸಲಿದೆ.