ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ತಮ್ಮ ತವರು ರಾಜ್ಯವಾದ ಉತ್ತರ ಪ್ರದೇಶದಲ್ಲಿ ಒಂದೂ ಸ್ಥಾನದಲ್ಲೂ ಗೆಲ್ಲದೇ ಶೂನ್ಯ ಸಾಧನೆ ಮಾಡಿದೆ.
2024ರ ಲೊಕಸಭಾ ಚುನಾವಣೆಯ ಮತಎಣಿಕೆ ಬಹುತೇಕ ಕೊನೆಯ ಹಂತಕ್ಕೆ ತಲುಪಿದ್ದು, ಯಾವುದೇ ಮೈತ್ರಿಕೂಟದಲ್ಲಿ ಗುರುತಿಸಿಕೊಳ್ಳದೇ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಹುಜನ ಸಮಾಜವಾದಿ ಪಕ್ಷ ಖಾತೆಯನ್ನೇ ತೆರೆಯದೇ ಕಳಪೆ ಸಾಧನೆ ಮಾಡಿದೆ.
ಬಹುಜನ ಸಮಾಜವಾದಿ ಪಕ್ಷ 80 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಕಾನ್ಶಿರಾಂ ನಂತರ ಪಕ್ಷವನ್ನು ಮುನ್ನಡೆಸುತ್ತಿರುವ ಮಾಯಾವತಿ ದಲಿತ ನಾಯಕಿಯಾಗಿ ಗುರುತಿಸಿಕೊಂಡಿದ್ದರು.
4 ಬಾರಿ ಉತ್ತರ ಪ್ರದೇಶದ ಸಿಎಂ ಆಗಿದ್ದ ಮಾಯಾವತಿ ಒಂದು ಬಾರಿ ಲೋಕಸಭೆಯನ್ನು ಪ್ರತಿನಿಧಿಸಿದ್ದರು. ಪಕ್ಷದ ನಾಯಕತ್ವವನ್ನು ಸೋದರ ಸಂಬಂಧಿಗೆ ನೀಡಿದ್ದ ಮಾಯಾವತಿ ಕೊನೆ ಕ್ಷಣದಲ್ಲಿ ತಪ್ಪಿನ ಅರಿವಾಗಿ ಅಧಿಕಾರವನ್ನು ವಾಪಸ್ ಪಡೆದಿದ್ದರು.