ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಕಾಂಗ್ರೆಸ್ ನವರಿಗೆ ರಾತ್ರಿ ನಿದ್ರೆಯೇ ಬಂದಿಲ್ಲ. ಪಾಕಿಸ್ತಾನ ಮತ್ತು ಕಾಂಗ್ರೆಸ್ ಇನ್ನೂ ಈ ದಾಳಿಯಿಂದ ಚೇತರಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಅಂಗವಾಗಿ ಭಾನುವಾರ ಅರಾಹ್ ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿ, ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ರಾಜಮನೆತನಕ್ಕೆ ನಿದ್ದೆ ಬರುತ್ತಿಲ್ಲ ಎಂದರು.
“ಭಾರತವು ಭಯೋತ್ಪಾದಕರನ್ನು ಅವರದ್ದೇ ಆದ ಅಡಗುತಾಣಗಳಲ್ಲಿ ಬೇಟೆಯಾಡುತ್ತಿದೆ. ಇತ್ತೀಚೆಗೆ ನಾವು ಆಪರೇಷನ್ ಸಿಂಧೂರ್ ಅನ್ನು ನಡೆಸಿದ್ದೇವೆ. ಇದರಿಂದ ಪ್ರತಿಯೊಬ್ಬ ಭಾರತೀಯ ಸೈನಿಕ ಹೆಮ್ಮೆಪಡುತ್ತಿದ್ದರೆ ಕೆಲವರಿಗೆ ನೋವಾಗುತ್ತಿದೆ ಎಂದರು.
೩೭೦ನೇ ವಿಧಿ ರದ್ದುಗೊಳಿಸುವ ಮೂಲ ಮೋದಿ ನೀಡಿದ ಗ್ಯಾರಂಟಿ ಈಡೇರಿದೆ. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂವಿಧಾನ ಆಡಳಿತ ನಡೆಯುತ್ತಿದೆ ಎಂದು ಅವರು ಹೇಳಿದರು.


