Wednesday, December 24, 2025
Google search engine
Homeರಾಜ್ಯರೈತನ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿ, 3 ಮರಿ ಸೆರೆ

ರೈತನ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿ, 3 ಮರಿ ಸೆರೆ

ರೈತನ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿ ಹಾಗೂ ಅದರ ಮೂರು ಮರಿಗಳನ್ನು ಮೈಸೂರಿನಲ್ಲಿ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಇದರಿಂದ ಕಳೆದ ಒಂದು ತಿಂಗಳಲ್ಲಿ ಮೈಸೂರು ಭಾಗದಲ್ಲಿ ಸೆರೆಹಿಡಿಯಲಾದ ಹುಲಿಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಇತ್ತೀಚಿಗೆ ಮುಳ್ಳೂರು ತಾಲೂಕಿನ ರೈತರ ಮೇಲೆ ಹಾಗೂ ದನಕರುಗಳ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿ ಹಾಗೂ ಮೂರು ಮರಿಗಳನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದಾರೆ.

ಹುಲಿ ಆರ್ಭಟದಿಂದ ಗ್ರಾಮದಲ್ಲಿ ಆತಂಕ ಮೂಡಿಸಿತ್ತು. ಹುಲಿಗಳ ಸೆರೆಗೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಅರಣ್ಯಾಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿದ ಬಳಿಕ ಮಂಗಳವಾರ ಹುಲಿ ಸೆರೆಸಿಕ್ಕಿದೆ.

ಮೈಸೂರು ಹಾಗೂ ಚಾಮರಾಜನಗರದ ಅರಣ್ಯ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಹುಲಿಗಳು ಸಂಚರಿಸುತ್ತಿದ್ದು, ಇವುಗಳ ಸೆರೆಗೆ ಅರಣ್ಯ ಸಿಬ್ಬಂದಿ ತಂತ್ರಗಳನ್ನು ರೂಪಿಸಿತ್ತು. ಈಗ ಸೆರೆ ಹಿಡಿಯಲಾದ ಹುಲಿಗಳು ಆರೋಗ್ಯವಾಗಿವೆ.

ಸೆರೆ ಹಿಡಿಯಲಾದ 7 ದೊಡ್ಡ ಹುಲಿಗಳು ಹಾಗೂ ಮರಿಗಳನ್ನು ಮೈಸೂರಿನ ಕೂರ್ಗಳಿಯ ಪುನವರ್ಸತಿ ಕೇಂದ್ರಕ್ಕೆ ಮತ್ತೆ ಹುಲಿ ಮರಿಗಳನ್ನು ಬನ್ನೇರುಘಟ್ಟಕ್ಕೆ ಹಾಗೂ ಮತ್ತೆ ಕೆಲವು ತಾಯಿ ಮತ್ತು ಮರಿಗಳನ್ನು ಕಾಡಿಗೆ ಬಿಡಲಾಗುತ್ತದೆ. ಸೆರೆ ಸಿಕ್ಕ ಹುಲಿಯಲ್ಲಿ ಒಂದು ಮಾತ್ರ ಗಾಯಗೊಂಡಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗಿದೆ.

ಅಕ್ಟೋಬರ್ 16ರಂದು ಬಡಗಲಪುರದ ರೈತನ ಮೇಲೆ ನಡೆದ ಹುಲಿ ದಾಳಿಯಿಂದ ಶುರುವಾದ ಬೇಟೆ ಅಲ್ಲಿಂದ ಇಲ್ಲಿಯವರಗೆ 3 ಜನ ರೈತರನ್ನು ಬಲಿ ಪಡೆದಿದೆ. ದಾಳಿ ನಡೆಸಿದ ಹುಲಿ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ಇರುವ ಸುಮಾರು 7 ದೊಡ್ಡ ಹುಲಿ ಹಾಗೂ 8 ಮರಿಗಳು ಸೇರಿದಂತೆ ಒಟ್ಟು 15 ಹುಲಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಮೈಸೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್​) ಪರಮೇಶ್ವರ್ ತಿಳಿಸಿದ್ದಾರೆ.

ಕಾಡಂಚಿನ ಗ್ರಾಮಗಳಲ್ಲಿ ಹುಲಿ ಬರಲು ಪ್ರಮುಖ ಕಾರಣಗಳು ಹಲವು ಇವೆ. ಅಂಗವೈಕಲ್ಯಗೊಂಡ ಹುಲಿ ಸುಲಭ ಆಹಾರ ಸಿಗುವ ಕಾಡಂಚಿನ ಗ್ರಾಮಗಳಿಗೆ ಬರುತ್ತದೆ. ಪ್ರದೇಶವಾರು ಹೋರಾಟದಲ್ಲಿ ಸೋತ ಹುಲಿಗಳು ಕಾಡಂಚಿನ ಗ್ರಾಮಗಳತ್ತ ಸುಲಭವಾಗಿ ಸಿಗುವ ಸಾಕು ಪ್ರಾಣಿಗಳ ಬೇಟೆಗಾಗಿ ಬರುತ್ತವೆ. ಮುಖ್ಯವಾಗಿ ಹೆಣ್ಣು ಹುಲಿ ತನ್ನ ಮರಿಗಳೊಂದಿಗೆ ಕಾಡಂಚಿನ ಗ್ರಾಮಗಳಲ್ಲಿ ಆಹಾರ ಆರಸಿ ಬರುವುದು ಸಹಜ ಎಂದು ಹೇಳಿದರು.

ರೈತರ ಸಂತಸ

ಇಂದಿನ ಕಾರ್ಯಾಚರಣೆಯಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳನ್ನು ಸೆರೆಹಿಡಿದ ಬಗ್ಗೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ರೈತರಿಗೆ ತಿಳುವಳಿಕೆ ಹಾಗೂ ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗಿದೆ. ಜಾನುವಾರು ಮೇಯಿಸಲು ಹೋಗುವ ಜನರು ತಮ್ಮ ಜಾನುವಾರುಗಳ ಮೇಲೆ ದಾಳಿಯಾದಾಗ ಅದನ್ನು ಬಿಡಿಸುವ ಪ್ರಯತ್ನ ಮಾಡಬೇಡಿ ಎಂದು ರೈತರಿಗೆ ಸೂಚನೆ ನೀಡಲಾಗಿದೆ. ಕಳೆದ 32 ದಿನಗಳಿಂದ 15 ಹುಲಿ ಮತ್ತು ಮರಿಗಳನ್ನು ಸೆರೆ ಹಿಡಿದಿರುವುದರಿಂದ ರೈತರಿಗೆ ಸಂತೋಷವಾಗಿದೆ ಎಂದು ಡಿಸಿಎಫ್​ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments