ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹತಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಿಂದ ಗಾಯಗೊಂಡಿರುವ ನಾಯಕ ಶುಭಮನ್ ಗಿಲ್ ಹೊರಗುಳಿಯಲಿದ್ದು, ಯುವ ಬ್ಯಾಟ್ಸ್ ಮನ್ ಸಾಯಿ ಸುದರ್ಶನ್ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲುಂಡಿತ್ತು. ಅಲ್ಲದೇ ಶುಭಮನ್ ಗಿಲ್ ಗಾಯಗೊಂಡಿದ್ದರು. ಒಂದರ ಮೇಲೆ ಒಂದರಂತೆ ಗಾಯದ ಬರೆ ಬಿದ್ದಿರುವ ಭಾರತ ತಂಡ ಸರಣಿ ಉಳಿಸಿಕೊಳ್ಳಬೇಕಾದರೆ ಈ ಪಂದ್ಯ ಗೆಲ್ಲಲೇಬೇಕಾಗಿದೆ.
ಒತ್ತಡದಲ್ಲಿರುವ ಭಾರತ ತಂಡ ಯುವ ಆಟಗಾರ 24 ವರ್ಷದ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ಸರಣಿಯಲ್ಲಿ 30.33ರ ಸರಾಸರಿಯಲ್ಲಿ 273 ರನ್ ಗಳಿಸಿದ್ದರು.
ಕುತ್ತಿಗೆ ನೋವು ಉಂಟಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದ ಗಿಲ್ ಗಾಯದ ನಡುವೆಯೂ ಗುವಾಹತಿಗೆ ತಂಡದ ಜೊತೆ ಬಂದಿದ್ದು, ಈ ಪಂದ್ಯದಲ್ಲಿ ಆಡಲು ಉತ್ಸುಕರಾಗಿದ್ದರು. ಆದರೆ ತಂಡ ರಿಸ್ಕ್ ತೆಗೆದುಕೊಳ್ಳಲು ಬಯಸದ ಕಾರಣ ಗಿಲ್ ಅವರನ್ನು ಅಂತಿಮ 11ರ ಬಳಗದಿಂದ ಹೊರಗಿಡಲು ನಿರ್ಧರಿಸಿತು.


