2024ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ತಪ್ಪಾಗಿ ಊಹಿಸಿದ್ದೆ ಎಂದು ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಒಪ್ಪಿಕೊಂಡಿದ್ದಾರೆ.
ಚುನಾವಣಾ ಫಲಿತಾಂಶದ ನಂತರ ಮೊದಲ ಬಾರಿ ಖಾಸಗಿ ಟೀವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹೌದು, ನಾನು ಮತ್ತು ಚುನಾವಣಾ ವಿಶ್ಲೇಷಕರು ಚುನಾವಣಾ ಫಲಿತಾಂಶವನ್ನು ತಪ್ಪಾಗಿ ಊಹಿಸಿದ್ದೆವು. ತಪ್ಪು ಊಹೆ ಮಾಡಿದ್ದಕ್ಕೆ ಉಪ್ಪು ತಿನ್ನಲು ಸಿದ್ಧ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದ್ದು, 370ರೊಳಗೆ ಸ್ಥಾನ ಖಚಿತ. ಕಾಂಗ್ರೆಸ್ 100ರ ಗಡಿ ದಾಟುವುದು ಕಷ್ಟ. ಈ ಚುನಾವಣೆ ನಂತರ ರಾಹುಲ್ ಗಾಂಧಿ ರಾಜಕೀಯ ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ಹೇಳಿದ್ದರು.
ನಾನು ಈಗಾಗಲೇ ಚುನಾವಣೆಯಲ್ಲಿ ಬಿಜೆಪಿ 300ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿದ್ದೆ. ಆದರೆ ನಾವು ಊಹಿಸಿದ್ದಕ್ಕಿಂತ ಶೇ.20ರಷ್ಟು ಫಲಿತಾಂಶದಲ್ಲಿ ವ್ಯತ್ಯಸ ಆಗಿದೆ. ಇದು ತುಂಬಾ ದೊಡ್ಡದು. ಆದ್ದರಿಂದ ನಾನು ತಪ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಸಾಮಾನ್ಯವಾಗಿ ಚುನಾವಣಾ ವಿಶ್ಲೇಷಕರು ಸಂಖ್ಯೆಗಳನ್ನು ಹೇಳುವುದಿಲ್ಲ. ಆದರೆ ನಾನು ಕಳೆದೆರಡು ವರ್ಷಗಳಿಂದ ನಂಬರ್ ಹೇಳುತ್ತಿದ್ದೆ. ಆದರೆ ಈ ಬಾರಿ ನನ್ನ ಲೆಕ್ಕಾಚಾರ ತಪ್ಪಾಗಿದೆ. ಅದರಲ್ಲೂ ಪಶ್ಚಿಮ ಬಂಗಾಳದ ಬಗ್ಗೆ ನೀಡಿದ್ದ ಸಂಖ್ಯೆ ತಪ್ಪಾಗಿದೆ ಎಂದು ಪ್ರಶಾಂತ್ ಕಿಶೋರ್ ವಿವರಿಸಿದರು.