ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪತ್ನಿ ಆಸ್ತಿ 535 ಕೋಟಿ ರೂ.ಗೆ ಹಾಗೂ ಪುತ್ರನ ಆಸ್ತಿ 237 ಕೋಟಿ ರೂ.ಗೆ ಕೇವಲ 5 ದಿನದಲ್ಲಿ ಏರಿಕೆಯಾಗಿದೆ.
ಲೋಕಸಭೆ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಜಯಭೇರಿ ಬಾರಿಸಿತ್ತು. ಅಲ್ಲದೇ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಲ್ಲಿ ಸೇರಿಕೊಂಡು ರಾಜ್ಯದಲ್ಲಿ ಮಾತ್ರವಲ್ಲ, ಕೇಂದ್ರದಲ್ಲೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ತೆಲುಗುದೇಶಂ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಹೆರಿಟೇಜ್ ಫುಡ್ಸ್ ಷೇರುಗಳು ಶೇ.55ರಷ್ಟು ಜಿಗಿತ ಕಂಡಿದೆ. ಇದರಿಂದ ಕಂಪನಿಯ ಪಾಲುದಾರರಾದ ಚಂದ್ರಬಾಬು ನಾಯ್ಡು ಪತ್ನಿ ಮತ್ತು ಪುತ್ರ ಅವರ ಆದಾಯದಲ್ಲಿ ಭಾರೀ ಏರಿಕೆಯಾಗಿದೆ.
ಚಂದ್ರಬಾಬು ನಾಯ್ಡು 1992ರಲ್ಲಿ ಆರಂಭಿಸಿದ ಹೆರಿಟೇಜ್ ಫುಡ್ಸ್ ಕಂಪನಿ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಭಾರೀ ಜಿಗಿತ ಕಂಡಿದೆ. ಇದರಿಂದ ಚಂದ್ರಬಾಬು ನಾಯ್ಡು ಪತ್ನಿ ನಾರಾ ಭುವನೇಶ್ವರಿ ಆದಾಯ 535 ಕೋಟಿ ರೂ.ಗೆ ಏರಿಕೆಯಾದರೆ, ಪುತ್ರ ನರೇಶ್ ಲೋಕೇಶ್ 424 ಕೋಟಿ ರೂ. ಏರಿಕೆಯಾಗಿದೆ.
ಹೆರಿಟೇಜ್ ಫುಡ್ಸ್ ಕಂಪನಿಯ ಷೇರು ಮೌಲ್ಯ ಜೂನ್ 3ರಂದು 424 ರೂ. ಆಗಿತ್ತು. ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಷೇರು ಮೌಲ್ಯ 661.25ರೂ.ಗೆ ಏರಿಕೆಯಾಗಿದೆ.