ಇಂಡಿಗೊ ವಿಮಾನಯಾನ ಸಂಚಾರ ವ್ಯತ್ಯಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದು, ವಿಮಾನ ಸಂಚಾರ ರದ್ದುಗೊಂಡಿದ್ದರಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಟಿಕೆಟ್ ದರ ಪಾವತಿಸಿದೆ.
ಇಂಡಿಗೋ ವಿಮಾನಯಾನ ಸಂಚಾರ ಸತತ 6 ದಿನಗಳ ನಂತರ ಪುನರಾರಂಭಗೊಂಡಿದೆ. ಶನಿವಾರ 1500 ವಿಮಾನಗಳ ಹಾರಾಟ ಆರಂಭವಾಗಿದ್ದರೆ, ಭಾನುವಾರ 1650ಕ್ಕೆ ಏರಿಕೆಯಾಗಿದೆ. ಇದರಿಂದ ಪ್ರಯಾಣಿಕರ ಸಮಸ್ಯೆ ಬಗೆಹರಿಯುವ ಪ್ರಕ್ರಿಯೆ ಆರಂಭವಾಗಿದೆ.
ವಿಮಾನಯಾನ ಸಂಚಾರ ರದ್ದುಗೊಂಡಿದ್ದರಿಂದ ಸಮಸ್ಯೆಗೆ ಒಳಗಾದ ಪ್ರಯಾಣಿಕರಿಗೆ ಮರುಪಾವತಿ ಘೋಷಿಸಿದ್ದ ಇಂಡಿಗೋ ಸಂಸ್ಥೆ ಭಾನುವಾರ 8 ಗಂಟೆ ಸುಮಾರಿಗೆ ಪರಿಹಾರ ನೀಡಲು 610 ಕೋಟಿ ರೂ. ವೆಚ್ಚ ಮಾಡಿದ್ದು, ಇನ್ನು ಹಲವು ಪ್ರಯಾಣಿಕರಿಗೆ ಮರು ಪಾವತಿ ಮಾಡಲಿದೆ. ಅಲ್ಲದೇ ಸಂಚಾರ ರದ್ದುಗೊಂಡಿದ್ದರಿಂದ ಮರು ಪ್ರಯಾಣ ಬುಕ್ ಮಾಡಿದ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗಿಲ್ಲ.
ಇದೇ ವೇಳೆ ಶೇ.30 ರಷ್ಟು ಸುಧಾರಣೆ ಆಗಿದ್ದು, ಭಾನುವಾರದ ವೇಳೆಗೆ ಶೇ.75ರಷ್ಟು ಸುಧಾರಣೆ ಕಂಡಿವೆ. 137ರಿಂದ 138 ಸ್ಥಳಗಳಿಗೆ ಕಾರ್ಯಾಚರಣೆ ಆರಂಭವಾಗಿದ್ದು, ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಇಂಡಿಗೊ ಸಂಸ್ಥೆ ಹೇಳಿದೆ.


